• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಪಘಾತ

ಟವರ್‌ನಲ್ಲಿ ಅಳವಡಿಸಿದ್ದ 1,83,600 ರೂ. ಮೌಲ್ಯದ ಸ್ವತ್ತು ಕಳವು

ಕಾರ್ಕಳ : ಟವರ್‌ನಲ್ಲಿ ಅಳವಡಿಸಿದ್ದ ಏರ್ಟೆಲ್ ಕಂಪೆನಿ ಮಾಲಿಕತ್ವದ ಎರಿಕ್ಸನ್ ಕಂಪೆನಿಯ ಬಿಡಿಭಾಗವಾದ 1,83,600 ರೂ. ಮೌಲ್ಯದ BBU ವನ್ನು ಕಳವುಗೈದ ಘಟನೆ ಏ. 9ರಂದು ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಕಾಬೆಟ್ಟು ಶೀತಲ್ ಬಾರ್ ಹಿಂಭಾಗದಲ್ಲಿ ಟವರ್ ವಿಷನ್ ಕಂಪೆನಿಯಿಂದ ಫೆಬ್ರವರಿ ತಿಂಗಳಿನಲ್ಲಿ ನಿರ್ಮಿಸಿದ್ದ ಟವರ್‌ನಲ್ಲಿ ನೆಟ್ವರ್ಕ್ ಸ್ಥಗಿತವಾಗಿರುವ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿರುತ್ತದೆ. ಏ. 9ರ ಮಧ್ಯಾಹ್ನ 1:30 ರಿಂದ 1:49 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎನ್ನಲಾಗುತ್ತಿದೆ. ಟವರ್ ವಿಷನ್

ಟವರ್‌ನಲ್ಲಿ ಅಳವಡಿಸಿದ್ದ 1,83,600 ರೂ. ಮೌಲ್ಯದ ಸ್ವತ್ತು ಕಳವು Read More »

ಓಮಿನಿ‌ ವ್ಯಾನ್​ಗೆ ಬಸ್​ ಡಿಕ್ಕಿ : ಮೂವರು ಸ್ಥಳದಲ್ಲೇ ದುರ್ಮರಣ

ದಾವಣೆಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ಓಮಿನಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೂರಗೊಂಡನಕೊಪ್ಪ ನಿವಾಸಿಗಳಾದ ದೇವರಾಜ್ (27), ರಾಕೇಶ್ (30) ಹಾಗೂ ಹರಮಘಟ್ಟ ಗ್ರಾಮದ ನಿವಾಸಿ ನಂಜುಂಡಪ್ಪ (83) ಮೃತ ದುರ್ದೈವಿಗಳು. ಇನ್ನುಳಿದಂತೆ ಆರಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓಮಿನಿ‌ ವ್ಯಾನ್​ಗೆ ಬಸ್​ ಡಿಕ್ಕಿ : ಮೂವರು ಸ್ಥಳದಲ್ಲೇ ದುರ್ಮರಣ Read More »

ಸಾಲಬಾಧೆ : ಹೆಂಡತಿ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಕಾರ್ಕಳ : ಸಾಲಬಾಧೆಯಿಂದ ಮನನೊಂದು ವ್ಯಕ್ತಿಯೋರ್ವ ಹೆಂಡತಿ ಮಕ್ಕಳಿಗೆ ವಿಷ ನೀಡಿ‌ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏ. 9ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ಪ್ರಭಾಕರ್‌ ಆಚಾರ್ಯ ಊರಿನಲ್ಲಿ ವಿಪರೀತ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲು ಸಾಧ್ಯವಾಗದಿರುವ ಹಿನ್ನೆಲೆ ಹೆಂಡತಿ ಮಕ್ಕಳಿಗೆ ಜ್ಯೂಸ್ ಬಾಟಲಿಯಲ್ಲಿ ವಿಷ ಬೆರಸಿ ಕೊಟ್ಟು , ತಾನೂ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಾಲಬಾಧೆ : ಹೆಂಡತಿ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ Read More »

ಕಾರು -ಬೈಕ್‌ ಡಿಕ್ಕಿ : ಸವಾರ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಏ. 9ರಂದು ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ಸಂಭವಿಸಿದೆ.ನೀರೆ ಗ್ರಾಮದ ದಿಲೀಪ್‌ ಎಂಬವರು ಬೈಕ್‌ ಸವಾರಿ ಮಾಡಿಕೊಂಡು ಬೈಲೂರಿನಿಂದ ಕಾರ್ಕಳದೆಡೆಗೆ ಬರುತ್ತಿದ್ದು ಪಿಲಿಚಂಡಿ ಸ್ಥಾನದ ಬಳಿ ತಲುಪುವಾಗ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ನಾಗಾರಾಜ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದಿಲೀಪ್‌ ಕಾರಿನ ಗಾಜಿನ ಮೇಲೆ ಬಿದ್ದಿದ್ದು ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಕಾರ್ಕಳ ಸಿಟಿ

ಕಾರು -ಬೈಕ್‌ ಡಿಕ್ಕಿ : ಸವಾರ ಆಸ್ಪತ್ರೆ ದಾಖಲು Read More »

ಸ್ಕೂಟರ್‌ಗೆ ಕಾರು ಡಿಕ್ಕಿ : ಸವಾರ ಸಾವು

ಕಾರ್ಕಳ : ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಳಿ ಇರುವ ಅಧಿಧನ್‌ ಕಾಂಪ್ಲೆಕ್ಸ್‌ ಎದುರು ಗುರುವಾರ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಮುದ್ದು ಮಾಧವ (84) ಎಂಬವರು ಮೃತಪಟ್ಟಿದ್ದಾರೆ. ಮುದ್ದು ಮಾಧವ ಅವರು ರಸ್ತೆಯ ಇನ್ನೊಂದು ಬದಿಗೆ ಹೋಗಲು ಸ್ಕೂಟರ್‌ ನಿಲ್ಲಿಸಿ ಕಾಯುತ್ತಿದ್ದ ವೇಳೆ ಇಕೋ ಕಾರು ಬಂದು ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದು ಮಾಧವ ಅವರ ಹೆಲ್ಮೆಟ್‌ ಕಳಚಿ ಹೋಗಿ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರಗೆ ಒಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ

ಸ್ಕೂಟರ್‌ಗೆ ಕಾರು ಡಿಕ್ಕಿ : ಸವಾರ ಸಾವು Read More »

ಕಾರ್ಕಳ : ಟೂರಿಸ್ಟ್‌ ಬಸ್‌ ಪಲ್ಟಿ – ಪ್ರಯಾಣಿಕರು ಪಾರು

ಕಾರ್ಕಳ : ಟೂರಿಸ್ಟ್‌ ಬಸ್‌ ಪಲ್ಟಿಯಾಗಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಮಾ. 27ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ. ಮಂಡ್ಯದಿಂದ ಉಡುಪಿ ಕಡೆಗೆ ಸಾಗುತ್ತಿದ್ದ KA51C7246 ನೋಂದಾಯಿತ ಟೂರಿಸ್ಟ್‌ ಬಸ್‌ ಕುಕ್ಕುಂದೂರು ಮಸೀದಿ ಬಳಿ ಪಲ್ಟಿಯಾಗಿದೆ. ಪರಿಣಾಮವಾಗಿ ಬಸ್‌ನೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ದ್ವಿಚಕ್ರ ವಾಹನವೊಂದು ಅಡ್ಡಬಂದ ಕಾರಣದಿಂದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾರ್ಕಳ : ಟೂರಿಸ್ಟ್‌ ಬಸ್‌ ಪಲ್ಟಿ – ಪ್ರಯಾಣಿಕರು ಪಾರು Read More »

ಕಡಾರಿ ಕ್ರಾಸ್‌ನಲ್ಲಿ ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೊ ಪಲ್ಟಿ

ನಾಲ್ವರಿಗೆ ಗಾಯ – ಓರ್ವ ಸಾವು ಕಾರ್ಕಳ : ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಮಾಳ ಗ್ರಾಮದ ಕಡಾರಿ ಕ್ರಾಸ್‌ನಲ್ಲಿ ಮಾ. 21ರಂದು ಸಂಭವಿಸಿದೆ. ಹೆಜಮಾಡಿಯಿಂದ ಮಾಳದೆಡೆಗೆ ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಕಡಾರಿ ಕ್ರಾಸ್‌ನಲ್ಲಿ ಪಲ್ಟಿಯಾಗಿದೆ. ಪರಿಣಾಮವಾಗಿ ಐವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಓರ್ವ ಮೃತಪಟ್ಟಿರುತ್ತಾರೆ.ಟೆಂಪೋದಲ್ಲಿ ಚಾಲಕ ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಡಾರಿ ಕ್ರಾಸ್‌ನಲ್ಲಿ ತೆಂಗಿನಕಾಯಿ ಸಾಗಿಸುತ್ತಿದ್ದ ಟೆಂಪೊ ಪಲ್ಟಿ Read More »

ಸಾಫ್ಟ್‌ ಡ್ರಿಂಕ್ಸ್‌ ಸಾಗಿಸುತ್ತಿದ್ದ ವಾಹನಕ್ಕೆ ಕಂಟೈನರ್ ಡಿಕ್ಕಿ

ಇಬ್ಬರಿಗೆ ಗಾಯ – ಚಾಲಕ ಪರಾರಿ ಕಾರ್ಕಳ : ಸಾಫ್ಟ್‌ ಡ್ರಿಂಕ್ಸ್‌ ಸಾಗಿಸುತ್ತಿದ್ದ ವಾಹನವೊಂದಕ್ಕೆ ಕಂಟೈನರ್ ಡಿಕ್ಕಿಯಾದ ಘಟನೆ ಮಾ. 13ರಂದು ಮಧ್ಯಾಹ್ನ‌ ಗುಡ್ಡೆಯಂಗಡಿ ಸಮೀಪ ಸಂಭವಿಸಿದೆ. ಬೈಲೂರು ಸಂತೋಷ್‌ ಸಾಲ್ಯಾನ್‌ ಮಾಲಕತ್ವದ ಥಂಡ ಸಾಫ್ಟ್‌ಡ್ರಿಂಕ್ಸ್‌ಗಳನ್ನು ಬೈಲೂರಿನಿಂದ ಹಿರಿಯಡ್ಕದೆಡೆಗೆ ವಾಹನದಲ್ಲಿ ಸಾಗಿಸುತ್ತಿದ್ದಾಗ ಹಿಂದಿನಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಪಲ್ಟಿಯಾಗಿದ್ದು ಚಾಲಕ ಸಂತೋಷ್ ಸಾಲ್ಯಾನ್‌ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ವಾಹನದಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪಲ್ಟಿಯಾದ ಪರಿಣಾಮ ವಾಹನ ಸಂಪೂರ್ಣ

ಸಾಫ್ಟ್‌ ಡ್ರಿಂಕ್ಸ್‌ ಸಾಗಿಸುತ್ತಿದ್ದ ವಾಹನಕ್ಕೆ ಕಂಟೈನರ್ ಡಿಕ್ಕಿ Read More »

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ

ಕಾರ್ಕಳ : ವೇಗವಾಗಿ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಕಸಬಾ ಗ್ರಾಮದ ಮ್ಯಾಡಿಸ್‌ ಕಟ್ಟಿ ಕೆಫೆ ಸಮೀಪ ರಸ್ತೆ ಬದಿ ಮಲಗಿದ್ದ ಗಣೇಶ ಎಂಬವರ ಕಾಲುಗಳ ಮೇಲೆ ಚಲಿಸಿದ ಪರಿಣಾಮ ಗಣೇಶ ಅವರ ಎರಡೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮಾ.9ರ ರಾತ್ರಿ 11.45ರ ವೇಳೆಗೆ ಘಟನೆ ಸಂಭವಿಸಿದ್ದು, ಪೆರ್ವಾಜೆ ಕಸಬಾದ ರಾಮನಾಥ ಎಂಬವರು ನೀಡಿದ ದೂರಿನ ಪ್ರಕಾರ ನಗರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿ ಪಲ್ಟಿಯಾಗಿ ಡ್ರೈವರ್‌, ಕ್ಲೀನರ್‌ಗೆ

ಕಾಲಿನ ಮೇಲೆ ಚಲಿಸಿದ ಕಾರು : ಗಂಭೀರ ಗಾಯ Read More »

ರೆಂಜಾಳ : ಚಿರತೆ ದಾಳಿಗೆ ಎರಡು ದನ ಬಲಿ

ಕಾರ್ಕಳ : ರೆಂಜಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ದನಗಳು ಬಲಿಯಾದ ಘಟನೆ ಮಾ. 1ರಂದು ಸಂಭವಿಸಿದೆ. ಲೋಕಯ್ಯ ಎಂಬವರ ಮನೆಯ ನಾಲ್ಕು ದನಗಳನ್ನು ಮೇಯಲೇಂದು ಹೊರಬಿಟ್ಟಿದ್ದು, ಮನೆಗೆ ಹಿಂತಿರುಗಲಿಲ್ಲ. ಹುಡುಕಿಕೊಂಡು ಹೋದಾಗ ಬೀರ್‌ಮೇಲ್ ಎಂಬ ಪರಿಸರದಲ್ಲಿ ಚಿರತೆಯ ದಾಳಿಯಿಂದಾಗಿ ಎರಡು ದನಗಳು ಬಲಿಯಾಗಿರುವುದು ಗಮನಕ್ಕೆ ಬಂದಿರುತ್ತದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿರುತ್ತಾರೆ. ಬೀರ್‌ಮೇಲ್ ಪರಿಸರದಲ್ಲಿ ಚಿರತೆಯ ಹಾವಳಿಯಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆ ಮಾಡುತ್ತಾರೆ ಅಲ್ಲದೆ ಇದೆ ಪರಿಸರದಲ್ಲಿ ಸಣ್ಣ ಸಣ್ಣ ಮಕ್ಕಳು

ರೆಂಜಾಳ : ಚಿರತೆ ದಾಳಿಗೆ ಎರಡು ದನ ಬಲಿ Read More »

error: Content is protected !!
Scroll to Top