ವೃದ್ಧ ನಾಪತ್ತೆ: ಪತ್ತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ

ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಬೆಣ್ಣೆಕೊಟ್ಟು, ಸಚ್ಚೇರಿಪೇಟೆ ನಿವಾಸಿ ಉದಯ (69) ಅವರು ಕಾಣೆಯಾಗಿದ್ದು, ಪತ್ತೆಗೆ ಸಹಾಯ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದಾರೆ.
​ಇವರು ಕೆರೆಕಾಡುವಿನಿಂದ ಜುಲೈ 15ರಂದು ಮಗಳ ಮನೆಗೆ ಬಂದಿದ್ದರು. ಜುಲೈ 18ರ ಮಧ್ಯಾಹ್ನದಿಂದ ಸಂಜೆ ಅವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
​ಚಹರೆ ವಿವರ:
ಎತ್ತರ 155 ಸೆಂ.ಮೀ., ಕಪ್ಪು ಮೈಬಣ್ಣ, ಕೋಲು ಮುಖ ಹಾಗೂ ಸಾಧಾರಣ ಶರೀರ ಹೊಂದಿದ್ದಾರೆ. ಕಾಣೆಯಾದಾಗ ಕಾಫಿ ಬಣ್ಣದ ಲುಂಗಿ ಮತ್ತು ಶರ್ಟ್ ಧರಿಸಿದ್ದು, ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.
​ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
​ಕಾರ್ಕಳ ಗ್ರಾಮಾಂತರ ಠಾಣೆ: 9480805462
​ಕಾರ್ಕಳ ವೃತ್ತ ನಿರೀಕ್ಷಕರು: 9480805435



















































































error: Content is protected !!
Scroll to Top