ಆ. 1-15 : ಉಚಿತ ಯೋಗ ಶಿಬಿರ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮತ್ತು ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಇದರ ಜಂಟಿ ಆಶ್ರಯದಲ್ಲಿ 15 ದಿನಗಳ ಉಚಿತ ಯೋಗ ಶಿಬಿರವನ್ನು ಆ. 1 ರಿಂದ 15ರವರೆಗೆ ಆಯೋಜಿಸಲಾಗಿದೆ. ಖ್ಯಾತ ಯೋಗ ಗುರು ಮುಂಬೈ ಮಂಜುನಾಥ ಪೂಜಾರಿಯ ಅವರ ತರಬೇತಿಯಲ್ಲಿ ಈ ಯೋಗ ಶಿಬಿರವು ನಡೆಸಲಾಗುವುದು. ಕಾರ್ಕಳದ ಜೋಡುರಸ್ತೆಯ ಶ್ರೀನಿಧಿ ಸಂಕೀರ್ಣದ ಮೊದಲ ಮಹಡಿ ಕುಂಭಶ್ರೀ ಸೊಸೈಟಿ ಬಳಿಯ ಕೋಣೆಯಲ್ಲಿ ಆ. 1 ರಿಂದ 15ರವರೆಗೆ ಪ್ರತಿದಿನ ಸಂಜೆ 5.30 ರಿಂದ 6.30ರವರೆಗೆ ತರಬೇತಿಯನ್ನು ನಡೆಸಲಾಗುವುದು. ಉಚಿತ ಯೋಗ ಶಿಬಿರದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಿ ಇದರು ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕ್ಲಬ್ಬಿನ ಅಧ್ಯಕ್ಷ ಗೋಪಾಲ್‌ ಅಂಚನ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980255418, 7676401958, 9110450964 ದೂರವಾಣಿ ಸಂಪರ್ಕಿಸಬಹುದಾಗಿದೆ.























































































































error: Content is protected !!
Scroll to Top