ಉಭಯ ತಾಲೂಕಿನೆಲ್ಲೆಡೆ ಸಂಭ್ರಮದ ನಾಗರ ಪಂಚಮಿ

ಕಾರ್ಕಳ : ಕಾರ್ಕಳ ಹೆಬ್ರಿ ಉಭಯ ತಾಲೂಕಿನ ವಿವಿಧ ದೇವಸ್ಥಾನ, ನಾಗ ಬನಗಳಲ್ಲಿ ಮಂಗಳವಾರ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತನು-ತಂಬಿಲ ಅರ್ಪಿಸಿದರು. ಸೂಡ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಕಾರ್ಕಳ ಪೆರ್ವಾಜೆ ಹಾಗೂ ಅನಂತಪದ್ಮನಾಭ ದೇವಸ್ಥಾನ, ಕುಕ್ಕುಂದೂರು, ಶಿವತಿಕೆರೆ, ಕಾಳಿಕಾಂಬಾ, ನಿಂಜೂರು, ಪರಪು ನಾಗ ಬ್ರಹ್ಮಸ್ಥಾನ, ಸಾಂತ್ರಬೆಟ್ಟು ನಾಗಸ್ಥಾನ, ನಂದಳಿಕೆ ಶ್ರಿ ಮಹಾಲಿಂಗೇಶ್ವರ ದೇವಸ್ಥಾನ, ಕೆರ್ವಾಶೆ, ಅಂಡಾರು ಕರಿಯಾಲು, ಕೌಡೂರು, ಬೈಲೂರು, ನೀರೆ, ಯರ್ಲಪಾಡಿ ಮತ್ತು ಕರ್ವಾಲು ದೇವಸ್ಥಾನಗಳಲ್ಲಿ ನಾಗದೇವರಿಗೆ ವಿಶೇಷ ಪೂಜೆ ಜರುಗಿತು. ಕುಟುಂಬದ ನಾಗ, ಮೂಲನಾಗ ಸ್ಥಾನಗಳಿಗೆ ತೆರಳಿ ಭಕ್ತರು ಪೂಜೆ ಸಲ್ಲಿಸಿದರು. ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಾರ್ಕೆಟ್‌ಲ್ಲಿ ಸಿಯಾಳ, ಹೂ, ಅರಶಿಣ ಎಲೆ ಖರೀದಿ ಈ ವಾರ ಜೋರಾಗಿಯೇ ನಡೆದಿತ್ತು.















































































error: Content is protected !!
Scroll to Top