ಕಾರ್ಕಳ : ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವುಗೈದ ಘಟನೆ ಜೂ. 13ರಂದು ಕಾರ್ಕಳದಲ್ಲಿ ನಡೆದಿದೆ.
ಕಸಬಾ ಗ್ರಾಮದ ಗಣೇಶ ಎಂಬವರು ಬೆಳಗ್ಗೆ 7:50ಕ್ಕೆ ತಮ್ಮ ಸ್ಕೂಟಿ (KA20EK8722) ಯನ್ನು ಕಾರ್ಕಳ ಬಸ್ ನಿಲ್ದಾಣದ ಬಳಿಯಿರುವ ವೆಂಕಟರಮಣ ಸ್ವೀಟ್ಸ್ ಅಂಗಡಿ ಎದುರು ನಿಲ್ಲಿಸಿ ಅಂಗಡಿಯ ಒಳಗೆ ಹೋಗಿರುತ್ತಾರೆ. 8:20ಕ್ಕೆ ಹೊರಗೆ ಬಂದು ನೋಡಿದಾಗ ಸ್ಕೂಟಿ ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ. ಸ್ಕೂಟಿ ಹೋಂಡಾ ಕಂಪೆನಿಯ ಬಿಳಿ ಬಣ್ಣದ ಆಕ್ಟಿವಾ ಮಾದರಿಯದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು



























































