ಮಿಯ್ಯಾರು ಕಲ್ಲಗುಪ್ಪೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಕಾರ್ಕಳ : ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಿಯ್ಯಾರು ಕಲ್ಲಗುಪ್ಪೆ ಸ.ಹಿ.ಪ್ರಾ. ಶಾಲೆಯಲ್ಲಿ ಯೋಗ ಗುರು ಸತ್ಯೇಂದ್ರ ಪೈ ಅವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಯೋಗಾಸನವನ್ನು ವಿದ್ಯಾರ್ಥಿಗಳು ಮಾಡಿದ ಬಳಿಕ ಮಾತನಾಡಿದ ಅವರು ಯೋಗದಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್‌. ಡಿ.ಎಂ.ಸಿ ಉಪಾಧ್ಯಕ್ಷೆ ದೀಪ್ತಿ ದಿನೇಶ್ ಕಾಜರುಬೈಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್,
ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಮನೋಹರ ಯೋಗದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಸ್ವಾಗತ ನೀಡಿದರು. ಸಹ ಶಿಕ್ಷಕೀಯರಾದ ವನಿತ ಕಾರ್ಯಕ್ರಮ ನಿರೂಪಿಸಿ, ಸುನಂದಾ ಧನ್ಯವಾದವಿತ್ತರು. ಅಶ್ವಿನಿ, ಮಂಜುಳಾ ಕಾರ್ಯಕ್ರಮಕ್ಕೆ ಸಹಕರಿಸಿದರು























































































































error: Content is protected !!
Scroll to Top