ಬ್ರ್ಯಾಂಡೆಡ್ ಬಟ್ಟೆ 10% ಮತ್ತು ಮದುವೆ ಸೀರೆ ಇನ್ನಿತರೆ ಉಡುಪುಗಳ ಮೇಲೆ 20% ರಿಯಾಯಿತಿ
ಕಾರ್ಕಳ : ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ ಜವುಳಿ ಮಳಿಗೆ ಲಕ್ಷ್ಮೀ ಸಿಲ್ಕ್ಸ್ನಲ್ಲಿ ಮಾನ್ಸೂನ್ ಮೆಗಾ ಆಫರ್ ಜೂ. 25ರಿಂದ ಜುಲೈ 25ರವರೆಗೆ ನಡೆಯಲಿದೆ. ನವೀನ ಶೈಲಿಯ ಉಡುಪುಗಳು ಸ್ಟಾಕ್ ಲಭ್ಯವಿದ್ದು, 12 ವರುಷದಿಂದ ಗ್ರಾಹಕರಿಗೆ ಬೇಕಾದ ಎಲ್ಲ ರೀತಿಯ ನೂತನ ಶೈಲಿಯ ಸೀರೆಗಳು, ಮದುವೆ ಸೀರೆಗಳು, ಕಾಂಜಿವರಂ, ಬನಾರಸ್, ಇನ್ನಿತರ ರೇಶ್ಮೆ ಸೀರೆಗಳು, ಕಾಟನ್ ಹಾಗೂ ಫ್ಯಾನ್ಸಿ ಸೀರೆಗಳು, ಮಕ್ಕಳ ಉಡುಪುಗಳು, ಒಳ ಉಡುಪುಗಳು, ನವ ಶೈಲಿಯ ಚೂಡಿದಾರ, ನೈಟಿ, ಪುರುಷರ ಹಾಗೂ ಮಹಿಳೆಯರ ನೈಟ್ ಪ್ಯಾಂಟ್, ಬರ್ಮುಡಾ, ಟಿ-ಶರ್ಟ್, ಬೆಡ್ ಶೀಟ್ ಮೇಲೆ ಶೇಕಡಾ 20% ಆಕರ್ಷಕ ಆಫರ್ ನೀಡುತ್ತಿದ್ದಾರೆ. ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಹೊಸ ಸ್ಟಾಕ್ ಬಂದಿದ್ದು, ಎಲ್ಲ ವಯಸ್ಸಿನವರಿಗೆ ಮನಸ್ಸಿಗೊಪ್ಪುವ ಆಧುನಿಕ ಶೈಲಿಯ ಆಕರ್ಷಕ ವಿನ್ಯಾಸದ ದಿರಿಸುಗಳು ಇಲ್ಲಿ ಲಭ್ಯವಿದೆ.
ಲಕ್ಷ್ಮೀ ಸಿಲ್ಕ್ಸ್ನಲ್ಲಿ ಮಳೆಗಾಲದ ಆಫರ್ ಆಗಿ ಗ್ರಾಹಕರಿಗೆ ಬ್ರ್ಯಾಂಡೆಡ್ ಬಟ್ಟೆಗಳ ಮೇಲೆ ಶೇಕಡಾ 10% ಡಿಸ್ಕೌಂಟ್ ನೀಡಲಾಗುತ್ತಿದೆ. ಪ್ರತಿಯೊಂದು ಖರೀದಿ ಮೇಲೆ ಶೇ. 20% ರಿಯಾಯಿತಿ ಇದ್ದು, ತ್ವರೆ ಮಾಡಿರಿ ಇಂದೇ ಈ ಆಕರ್ಷಕ ಆಫರ್ ಮುಗಿಯುದರೊಳಗಾಗಿ ತಮಗೆ ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ಒಂದೇ ಮಳಿಗೆಯಲ್ಲಿ ಬಟ್ಟೆ ಖರೀದಿಸಿ. 10ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ ಉತ್ತಮ ಕ್ವಾಲಿಟಿಯ ಬ್ಲಾಂಕೆಟ್ ಉಚಿತವಾಗಿ ನೀಡುತ್ತಿದ್ದಾರೆ. ವಿಶೇಷ ಏನೆಂದರೆ ಪ್ರತಿವರುಷವೂ ಒಂದು ತಿಂಗಳ ರಿಯಾಯಿತಿ ಸೇಲ್ ನೀಡುತ್ತಾ ಬಂದಿದ್ದಾರೆ. ಎಲ್ಲವೂ ನೂತನ ಸಂಗ್ರಹವಾಗಿದ್ದು ಗ್ರಾಹಕರು ಆಫರ್ನ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.




























































