12 ಸ್ಥಾನಗಳನ್ನು ಗೆದ್ದ ಬಿಜೆಪಿ ಬೆಂಬಲಿತರು
ಬೈಲೂರು : ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಬಿಜೆಪಿ ಬೆಂಬಲಿಗರಾಗಿ ಸ್ಪರ್ಧಿಸಿದ್ದ 12 ಮಂದಿ ಸ್ಪರ್ಧಿಗಳು ವಿಜೇತರಾಗಿದ್ದಾರೆ. ಉದಯ ಕುಮಾರ್ ಹೆಗ್ಡೆ, ಕಿಶನ್, ಎನ್. ರವೀಂದ್ರ ನಾಯಕ್, ವಿನಯ ಕುಮಾರ್ ಶೆಟ್ಟಿ, ಎನ್. ವಿವೇಕಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ವಿನೋದ ಪೂಜಾರ್ತಿ, ಶಾಂತ, ದೇವೇಂದ್ರ ನಾಯಕ್, ಶಾಂತರಾಮ ಶೆಟ್ಟಿ, ಎನ್. ಬಿ. ಬಾಬು, ಶಂಕರ ನಾಯ್ಕ್ ವಿಜೇತರಾಗಿದ್ದಾರೆ.
























