ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಆಗ್ರಹ – ಕಾರ್ಕಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಮೌನ ಪ್ರತಿಭಟನೆ

ಕಾರ್ಕಳ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು‌ ಖಂಡಿಸಿ, ಸರಕಾರವು ಬಾಂಗ್ಲಾದೇಶಿ ಹಿಂದೂಗಳಿಗೆ ರಕ್ಷಣೆ ನೀಡಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಶಾಂತಿಯುತವಾಗಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಯಿತು.

ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತ್ಯಂತ ಅಮಾನವೀಯವಾಗಿ ಆಕ್ರಮಣಗಳಾಗುತ್ತಿದ್ದು ಹಿಂದೂಗಳನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡುವುದು, ಹಿಂದೂ ಸ್ತ್ರೀಯರನ್ನು ಅತ್ಯಾಚಾರ ಮಾಡುವುದು, ಹಿಂದೂಗಳ ಆಸ್ತಿಯನ್ನು ವಶಪಡಿಸಿಕೊಳ್ಳುವುದು ನಿರಂತರ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಬಾಂಗ್ಲಾದೇಶದಲ್ಲಿ ಆಧ್ಯಾತ್ಮ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಯ ಮೇಲೆ ಅಕ್ರಮಣವನ್ನು ನಡೆಸಿ ಅದರ ಪ್ರಮುಖರ ಮೇಲೆ ದಾಳಿ ಮಾಡುವುದು, ಅವರನ್ನು ಅಕ್ರಮವಾಗಿ ಬಂಧಿಸುವಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿದೆ. ಆದ್ದರಿಂದ ಸರಕಾರವು ಬಾಂಗ್ಲಾದೇಶಿ ಹಿಂದೂಗಳಿಗೆ ಸುರಕ್ಷತೆ ನೀಡಬೇಕೆಂದು ಸಮಿತಿಯವರು ಆಗ್ರಹಿಸಿದರು.

































































































error: Content is protected !!
Scroll to Top