ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ : ಕೋಟ ಸವಾಲು

ಉಡುಪಿ: ತನ್ನ ಭಾಷಾ ಜ್ಞಾನದ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಮಾಡಿರುವ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಸಂಸದನಾದ ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಭಾಷೆ ಬದುಕಿನ ಅವಿಭಾಜ್ಯ ಅಂಗ. ನನ್ನ ಹಿರಿಯರು ನನ್ನ ಭಾಷೆ ಬಗ್ಗೆ ಕಾಳಜಿಯ ಮಾತನ್ನು ಆಡಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸತ್ತಿನಲ್ಲಿ ಭಾಷಣ ಮಾಡಿ ಮತದಾರರನ್ನು ಮತ್ತು ಆ ಹಿರಿಯರನ್ನು ಖುಷಿ ಪಡಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭಾಷೆಯ ಕುರಿತಾಗಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಸದನಾದ ಆರೇ ತಿಂಗಳಿನ ಒಳಗೆ ಸಂಸತ್ತಿನಲ್ಲಿ ಭಾಷಣ ಮಾಡಿ ಅವರಿಗೆ ಖುಷಿ ಪಡಿಸುತ್ತೇನೆ. ಬಿಜೆಪಿ ಅಭ್ಯರ್ಥಿಯಾಗಿ ನನಗೆ ಇರುವ ಹೆಮ್ಮೆ ಏನೆಂದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಆ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ಅವರು ಮಾಡಿರುವ ಉತ್ತಮವಾದ, ಅಭಿವೃದ್ಧಿಪರ ಆಡಳಿತ, ಭಾರತವನ್ನು ವಿಶ್ವಗುರು ಮಾಡುವ ಆಡಳಿತ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಕೈ ಜೋಡಿಸಲು ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಒಬ್ಬನೇ ಅಭ್ಯರ್ಥಿ ಗೆದ್ದರೆ ಸಂಸತ್ತು ನಡೆಸಲು ಆಗುವುದಿಲ್ಲ. ನಾಯಕತ್ವದ ಪ್ರಶ್ನೆ ಬಂದಾಗ ನರೇಂದ್ರ ಮೋದಿಯವರ ನಾಯಕತ್ವವನ್ನು ನಾವು ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್‌ನವರು ಅವರ ನಾಯಕತ್ವದ ಬಗ್ಗೆ ಅವರು ಮಾತನಾಡಲಿ. ನಾಲ್ಕು ಬಾರಿ ಎಂಎಲ್‌ಯಾಗಿ ಮಂತ್ರಿಯಾಗಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಅನುಭವ ನನಗೆ ಇದೆ. ಹೀಗಾಗಿ ಸಂಸದನಾಗಿ ಕೂಡಾ ದಾಖಲೆಯ ಅಭಿವೃದ್ದಿಯನ್ನು ನಾನು ಮಾಡಬಲ್ಲೆ. ನಾನು ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.



































































































error: Content is protected !!
Scroll to Top