ಕಾರ್ಕಳದಲ್ಲಿ ಭಾರತ್‌ ಅಕ್ಕಿ ಮಾರಾಟಕ್ಕೆ ಚಾಲನೆ

ಕಾರ್ಕಳ : ಯಾವುದೇ ಜಾತಿ ಭೇದ ಭಾವವಿಲ್ಲದೆ ಎಲ್ಲರೂ ಒಪ್ಪುವಂತಹ, ಎಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದಾರೆ. ಒಂದು ಕೆ. ಜಿ. ಗೆ ರೂ. 60 ಇರುವ ಅಕ್ಕಿಯನ್ನು ಭಾರತ್‌ ಅಕ್ಕಿ ಎಂಬ ಹೆಸರಿನಲ್ಲಿ ರೂ. 29ಕ್ಕೆ ದೊರೆಯುವಂತೆ ಮಾಡಿರುವ ಮೋದಿಯವರ ಯೋಜನೆ ಪ್ರತಿಯೋರ್ವನನ್ನು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಇಂದು ಭಾರತ್ ಅಕ್ಕಿ ಮಾರಾಟಕ್ಕೆ ಕಾರ್ಕಳದಲ್ಲಿ ಚಾಲನೆ ನೀಡಲಾಗಿದೆ ಎಂದು ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಅಭಿಪ್ರಾಯಪಟ್ಟರು. ಪ್ರಸ್ತುತ ಆನೆಕೆರೆ ಭವಾನಿ ಮಿಲ್‌ ಬಳಿಯಿರುವ ಕಾರ್ಲಾ ಸೂಪರ್‌ ಮಾರ್ಕೆಟ್‌ನಲ್ಲಿ ಭಾರತ್‌ ಅಕ್ಕಿ ಲಭ್ಯವಿದೆ ಎಂದವರು ತಿಳಿಸಿದರು.

ಬಿಜೆಪಿಯ ಜಿಲ್ಲಾ ವಕ್ತಾರ ಮುಟ್ಲುಪಾಡಿ ಸತೀಶ್‌ ಶೆಟ್ಟಿ ಮಾತನಾಡಿ, ಇಡೀ ರಾಜ್ಯದಲ್ಲಿ ನೀರಿನ ಬರ ಎದುರಾಗುತ್ತಿದೆ. ಆದರೆ, ರಾಜ್ಯ ಸರಕಾರ ನಮ್ಮ ರಾಜ್ಯದ ನೀರನ್ನು ಮಾರಾಟ ಮಾಡುತ್ತಿರುವುದು ಅವರ ದುರಾಡಳಿತವನ್ನು ಪ್ರತಿನಿಧಿಸುತ್ತಿದೆ. ಇಂತಹ ದುರಾಡಳಿತಕ್ಕೆ ಬ್ರೇಕ್‌ ಹಾಕಬೇಕು. ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ದೇಶದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಒದಗಿಸುವುದು ಮೋದಿಯವರ ಆಶಯ. ಈ ನಿಟ್ಟಿನಲ್ಲಿ ಭಾರತ್ ಅಕ್ಕಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಹೇಳಿದರು.

ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ಕಾರ್ಯದರ್ಶಿ ಉದಯ್‌ ಎಸ್‌. ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಶಿವಪುರ ಸುರೇಶ್ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ಸೋಜನ್ ಜೇಮ್ಸ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಸುಹಾಸ್ ಶೆಟ್ಟಿ, ಕಾರ್ಕಳ ತಾಲೂಕು ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ಪದಾಧಿಕಾರಿಗಳು ಮತ್ತು ಸದಸ್ಯರು, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಕಳ ಬಿಜೆಪಿ ಕಾರ್ಯದರ್ಶಿ ಹರ್ಷವರ್ಧನ್‌ ನಿಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

































































































error: Content is protected !!
Scroll to Top