30 ಸಾವಿರ ರೂ. ಬೆಲೆಯ ಸ್ಕೂಟಿಗೆ 3 ಲಕ್ಷ ರೂ. ದಂಡ

ಬೆಂಗಳೂರು : 30 ಸಾವಿರ ರೂ. ಬೆಲೆಯಿರುವ ಸ್ಕೂಟಿಗೆ ಬೆಂಗಳೂರು ಪೊಲೀಸರು 3.22 ಲ. ರೂ. ದಂಡ ವಿಧಿಸಿದ್ದಾರೆ. ಈ ಸ್ಕೂಟಿ ಬರೋಬ್ಬರಿ 643 ಸಲ ಸಂಚಾರ ನಿಯಮ ಉಲ್ಲಂಘನೆ ಮಾಡಿದೆಯಂತೆ.
ಸ್ಕೂಟಿ ಪೆಪ್ ದ್ವಿಚಕ್ರ ವಾಹನವೊಂದು ಬರೊಬ್ಬರಿ 643 ಸಲ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಹೆಲ್ಮೆಟ್, ಸಿಗ್ನಲ್ ಜಂಪ್ ಸೇರಿದಂತೆ ಬಹುತೇಕ ಸಂಚಾರಿ ನಿಯಮಗಳನ್ನೆಲ್ಲ ಉಲ್ಲಂಘಿಸಿದೆ.

ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಸ್ಕೂಟಿ ನಂಬರ್ KA 04, KF 9072 ಎಂದಾಗಿದ್ದು, ಬೆಂಗಳೂರಿನ ಆರ್‌ಟಿ ನಗರ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಕೂಟಿ ಮಾಲಕರು ಮತ್ತು ಸವಾರನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

a href="#" target="_blank">







































error: Content is protected !!
Scroll to Top