ಕಿರುತೆರೆ ನಟಿಯ ಕುಟುಂಬ ಇಸ್ರೇಲ್‌ನಲ್ಲಿ ಹತ್ಯೆ

ಮಕ್ಕಳ ಕಣ್ಣೆದುರೇ ಸಹೋದರಿ ಮತ್ತು ಬಾವನನ್ನು ಕೊಂದಿದ್ದಾರೆ ಎಂದ ನಟಿ

ಮುಂಬಯಿ: ಹಮಾಸ್‌ ಉಗ್ರರು ಇಸ್ರೇಲ್‌ನಲ್ಲಿದ್ದ ಕಿರುತೆರೆ ನಟಿಯೊಬ್ಬರ ಕುಟುಂಬದವರನ್ನು ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ನಟಿಯೇ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ. ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಹಾಗೂ ರೂಪದರ್ಶಿಯಾಗಿರುವ ಮಧುರಾ ನಾಯ್ಕ್ ಅವರ ಸಹೋದರಿ ಹಾಗೂ ಸಹೋದರಿಯ ಗಂಡನನ್ನು ಹಮಾಸ್‌ ಉಗ್ರರು ಹತ್ಯೆ ಮಾಡಿದ್ದಾರೆ.
ಸಹೋದರಿ ಒದಾಯ, ಆಕೆಯ ಪತಿಯನ್ನು ಅವರ ಮಕ್ಕಳ ಮುಂದೆಯೇ ಹತ್ಯೆ ಮಾಡಲಾಗಿದೆ ಎಂದು ಮಧುರಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇಸ್ರೇಲ್‌ನಲ್ಲಿ ಅವರ ಮಕ್ಕಳ ಎದುರೇ ಇಬ್ಬರನ್ನು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನನ್ನ ಸಹೋದರಿ ಮತ್ತು ಅವಳ ಪತಿಯನ್ನು ಪ್ಯಾಲೆಸ್ತೀನ್ ಉಗ್ರರು ಮಕ್ಕಳ ಮುಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.







































































error: Content is protected !!
Scroll to Top