ಕಾರ್ಕಳ : ಕ್ರಿಯೇಟಿವ್ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಸೆ. 20ರಂದು ನಡೆಯಿತು. ಸಭೆಯ ಮುಖ್ಯ ಅತಿಥಿ ಉದಯ ಕುಮಾರ್ ಹೆಗ್ಡೆ ಮಾತನಾಡುತ್ತಾ, ಸ್ವಾಸ್ಥ್ಯ ಸಮಾಜವನ್ನು ಸಮೃದ್ಧವಾಗಿರಿಸಲು ವಿದ್ಯಾರ್ಥಿಗಳು ಪಣತೊಡಬೇಕು, ಹಾಗೂ ಪ್ರಥಮವಾಗಿ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಹಿರ್ಗಾನ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡುತ್ತಾ ಮೌಲ್ಯಯುತ ಶಿಕ್ಷಣ, ಸಂಸ್ಕಾರಯುತ ಬದುಕು ಮತ್ತು ದುಶ್ಚಟ ರಹಿತ ಜೀವನ ಶೈಲಿಯು ಪ್ರತಿಯೊಬ್ಬನು ಅಳವಡಿಸಿಕೊಂಡರೆ ಬದುಕು ಹಸನಾಗಬಹುದು ಎಂದರು. ಮಧ್ಯಪಾನ, ತಂಬಾಕು, ಡ್ರಗ್ಸ್ ನಮ್ಮ ಜೀವನವನ್ನು ಹೇಗೆ ಹಾಳು ಮಾಡುತ್ತವೆ ಹಾಗೂ ಅವುಗಳ ದುಷ್ಪರಿಣಾಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ನಂದಕುಮಾರ್ ವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ವಹಿಸಿದ್ದರು. ಉಪನ್ಯಾಸಕರಾದ ರಾಘವೇಂದ್ರ ರಾವ್ ಮತ್ತು ಎನ್‌ಎಸ್‌ಎಸ್ ಯೋಜನಾಧಿಕಾರಿ ಉಮೇಶ್ ಉಪಸ್ಥಿತರಿದ್ದರು. ಚಂದ್ರಕಾಂತ್ ಸ್ವಾಗತಿಸಿ, ತಿಪ್ಪೆಸ್ವಾಮಿ ನಿರೂಪಿಸಿದರು. ಯೋಜನೆಯ ಮೇಲ್ವಿಚಾರಕಿ ಗೀತಾ ಹೆಗ್ಡೆ ವಂದಿಸಿದರು.