ಉಡುಪಿ: ಒಎಲ್‌ಎಕ್ಸ್‌ನಲ್ಲಿ ಸೊತ್ತು ಮಾರಾಟಕ್ಕಿಟ್ಟಿದ್ದ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಖರೀದಿಸುವ ನೆಪದಲ್ಲಿ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ. ಸೊತ್ತುಗಳನ್ನು ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ವಂಚನೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಉಷಾ ಕಿರಣ್ ಎಂಬ ಮಹಿಳೆ ಒಎಲ್‌ಎಕ್ಸ್‌ನಲ್ಲಿ ಸೊತ್ತುಗಳ ಮಾರಾಟದ ಜಾಹೀರಾತು ಪ್ರಕಟಿಸಿದ್ದರು. ಇದನ್ನು ನೋಡಿದ ವಂಚಕನೊಬ್ಬ ಮಹಿಳೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದ. ಬಳಿಕ ಮಹಿಳೆಯೊಬ್ಬಳು ಕರೆ ಮಾಡಿ ಉಷಾ ಕಿರಣ್ ಜತೆ ಮಾತನಾಡಿ ಸೊತ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದಳು. ತನ್ನಲ್ಲಿ ನಗದು ಹಣವಿಲ್ಲ ಗೂಗಲ್ ಪೇ ಮಾಡುವುದಾಗಿ ತಿಳಿಸಿ 2 ಗಂಟೆಯ ಬಳಿಕ ಮಹಿಳೆಯ ಮೊಬೈಲ್‌ಗೆ ಹಲವು ಕ್ಯೂಆರ್ ಕೋಡ್‌ಗಳನ್ನು ಕಳುಹಿಸಿದ್ದಾಳೆ. ಇದಾದ ಬಳಿಕ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಒಟ್ಟು 1,28,496 ರೂ. ಮಹಿಳೆ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಎಲ್‌ಎಕ್ಸ್‌ನಲ್ಲಿ ಸೊತ್ತು ಮಾರಾಟಕ್ಕಿಟ್ಟ ಮಹಿಳೆಗೆ ವಂಚನೆ
