ತಲೆ ಬೋಳಿಸುವ ಪ್ರತಿಜ್ಞೆ – ಬಿಜೆಪಿ ಜಿಲ್ಲಾಧ್ಯಕ್ಷರ ಮನೋವೈಫಲ್ಯಕ್ಕೆ ಸಾಕ್ಷಿ : ಕಾಂಗ್ರೆಸ್‌ ಲೇವಡಿ

ಕಾರ್ಕಳ : ತಲೆಯೇ ಇಲ್ಲದ ಕಬಂಧ ಮನಸ್ಥಿತಿಯವರಿಗೆ ತಲೆ ಬೋಳಿಸುವುದು ಒಂದು ಸಮಸ್ಯೆಯೇ ಅಲ್ಲ. ಬಹುಶ: ಈ ಭಂಡ ರ್ಯದಿಂದಲೇ ಅಂತವರು ತಲೆ ಬೋಳಿಸುವ ಪ್ರತಿಜ್ಞೆ ಮಾಡುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಯೊಂದನ್ನು ಉಲ್ಲೇಖಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಲೇವಡಿ ಮಾಡಿದೆ. ಕಾಂಗ್ರೆಸ್ ಚುನಾವಣೆ ಪೂರ್ವ ಜನರಿಗೆ ನೀಡಿದ 5 ಭರವಸೆಗಳನ್ನು ತಾನು ಅಧಿಕಾರಕ್ಕೆ ಬರುತ್ತಲೆ ಕಾನೂನಾತ್ಮಕ ಬದ್ಧತೆಯೊಂದಿಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವ ದಿನಾಂಕ ಘೋಷಿಸಿದೆ. ಇದನ್ನು ಕಂಡು ದೃತಿಗೆಟ್ಟು ದಿಗ್ಭ್ರಮೆಗೊಂಡ ಬಿಜೆಪಿಯ ನಾಯಕರೆನ್ನಿಸಿಕೊಂಡವರು ತಲೆ ಬೋಳಿಸುವ ಪ್ರತಿಜ್ಞೆಯ ಹಂತಕ್ಕೆ ಇಳಿದದ್ದು ಅವರ ಮನೋ ವೈಫಲ್ಯಕ್ಕೆ ಸಾಕ್ಷಿ. ಅವರ ರಾಜಕೀಯ ನಡೆಯ ಜನವಿರೋಧಿ ನಿಲುವು ಈ ಮೂಲಕ ಬಟಾಬಯಲಾಗಿದೆ. ಬಹುಶ: ಕಳೆದ ಐದು ವರ್ಷಗಳಿಂದ ಜನರನ್ನು ಸುಲಿದೇ ಬಲಿದು ಅಧಿಕಾರ ನಡೆಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಈ ಜನಪರ ಚಿಂತನೆಯ ಯೋಜನೆಗಳು ತಮ್ಮ ಅಧಿಕಾರ ಹಗರಣದ ಮಗ್ಗುಲಮುಳ್ಳಾಗಿ ಕಾಡಿ ಇಂತಹ ಅಪಸವ್ಯದ ಪ್ರತಿಜ್ಞೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಪಕ್ಷದ ಜನಾಭಿವೃದ್ದಿಯ ಕೊಡುಗೆಗಳನ್ನು ಟೀಕಿಸುವುದನ್ನು ರಾಜಕೀಯ ಕಾಯಕವಾಗಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷರು ಈ ಮೊದಲು ಲೋಕಸಭಾ ಚುನಾವಣೆಯ ಮುನ್ನ ದೇಶವಾಸಿಗಳಿಗೆ ನೀಡಿದ ಭರವಸೆಗಳು ಏನಾದವು ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಿಶ್ವದ ಅಭಿವೃದ್ದಿಶೀಲ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಭಾರತವನ್ನು ತನ್ನ ಆಡಳಿತಾವಧಿಯ ಅಪರ ಆರ್ಥಿಕ ನೀತಿಯಡಿಯಲ್ಲಿ 164ನೇ ಸ್ಥಾನಕ್ಕೆ ತಳ್ಳಿದ ಬಿಜೆಪಿಯವರಿಗೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಶಕ್ತಿಯಾದರು ಎಲ್ಲಿಂದ ಬರಬೇಕು. ಸುಳ್ಳು ಭರವಸೆಗಳ ಸರದಾರರಿಗೆ ಕಾಂಗ್ರೆಸ್ ಪಕ್ಷದ ಭರವಸೆಗಳು ಸುಳ್ಳಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆerror: Content is protected !!
Scroll to Top