ನಾಮಪತ್ರ ಸಲ್ಲಿಕೆ ದಿನ ಭಾಗವಹಿಸುವಂತೆ ಆಹ್ವಾನ
ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಿಜೆಪಿ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಉಮೇದುವಾರಿಕೆ ಸಲ್ಲಿಕೆಗೆ ದಿನಗಣನೆ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರು ಎ. 19ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ಅವರು ಭಾನುವಾರ ಹೆಬ್ರಿ ತಾಲೂಕು ಚಾರ ಗ್ರಾಮದ ಹುತ್ತುರ್ಕೆಯಲ್ಲಿರುವ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಮನೆಗೆ ತೆರಳಿ ಅವರ ಪತ್ನಿ ಪ್ರಕಾಶಿಣಿ ಅವರಲ್ಲಿ ನಾಮಪತ್ರ ಸಲ್ಲಿಕೆಯಂದು ಭಾಗವಹಿಸುವಂತೆ ವಿನಂತಿಸಿದರು.
























