ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಲ್ಲಾಳಿಯ ಕಾಂಗ್ರೆಸ್ ನ ಕಾರ್ಯಕರ್ತರಾದ ಪ್ರವೀಣ್ ಆಚಾರ್ಯ, ನಾಗರಾಜ ನಾಯಕ್ ಮತ್ತು ರಾಜೇಶ್ ನಾಯ್ಕ ಅವರು ಎ. 16 ವಿಕಾಸ ಕಚೇರಿಯಲ್ಲಿ ಬಿಜೆಪಿ ಸೇರಿದರು. ಸಚಿವ ವಿ. ಸುನಿಲ್ ಕುಮಾರ್ ಪಕ್ಷದ ಧ್ವಜ ಹಸ್ತಾಂತರಿಸಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಹೆಬ್ರಿಯ ಬಿಜೆಪಿ ಪ್ರಮುಖರಾದ ಗುರುದಾಸ ಶೆಣೈ, ಜಯಕರ ಪೂಜಾರಿ, ಎಚ್ಕೆ ಸುಧಾಕರ, ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್ ಪೂಜಾರಿ, ಜಿ.ಪಂ. ನಿಟಕಪೂರ್ವ ಸದಸ್ಯ ಜ್ಯೋತಿ ಹರೀಶ್ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಹೆಬ್ರಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
























