ಡಿ. ರೂಪಾ ವಿರುದ್ಧದ ನಿರ್ಬಂಧಕಾಜ್ಞೆ ತೆರವುಗೊಳಿಸಿದ ಹೈಕೋರ್ಟ್ : ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪ ನಡುವಿನ ಸಮರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಬಂಧಕಾಜ್ಞೆ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಐಪಿಎಸ್ ಅಧಿಕಾರಿ ಡಿ. ರೂಪ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಹೊರಡಿಸಿದ್ದ ನಿರ್ಬಂಧಕಾಜ್ಞೆ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದ್ದು, ಈಗ ರೂಪಾ ಮೌದ್ಗಿಲ್‌ ಅವರಿಗೆ ರೋಹಿಣಿ ಸಿಂಧೂರಿ ಕುರಿತಂತೆ ಆರೋಪಗಳನ್ನು ಮಾಡಲು ಸ್ವಾತಂತ್ರ್ಯ ಸಿಕ್ಕಂತಾಗಿದೆ. ಈ ಮೂಲಕ ರೋಹಿಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ನಿರ್ಬಂಧಕಾಜ್ಞೆ ತೆರವಿನಿಂದಾಗಿ ತಮ್ಮ ವಿರುದ್ಧ ಮತ್ತೆ ಯಾವ ಆರೋಪಗಳು ಬರುತ್ತವೆ ಎಂಬ ಆತಂಕ ರೋಹಿಣಿ ಸಿಂಧೂರಿಯಲ್ಲಿದೆ.

ಮಾನಹಾನಿಕರ ಬರಹಕ್ಕೆ ನಿರ್ಬಂಧ:
ಐಎಎಸ್‌ ಅಧಿಕಾರಿ ರೋಹಿಣಿ ಸೀಂಧೂರಿ ಅವರ ವಿರುದ್ಧ ಪದೇ ಪದೆ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುತ್ತಿದ್ದ ಡಿ.ರೂಪಾ ಹಾಗೂ ಅಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಮಾಧ್ಯಮಗಳಿಗೆ ನ್ಯಾಯಾಲಯ ಫೆಬ್ರವರಿಯಲ್ಲಿ ನಿರ್ಬಂಧಕಾಜ್ಞೆಯನ್ನು ಹೊರಡಿಸಿತ್ತು. ಈ ಮೂಲಕ ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದೇ ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಪೋಸ್ಟ್‌ಗಳನ್ನು ಮಾಡುತ್ತಿದ್ದ ಡಿ. ರೂಪಾ ಅವರ ಬಾಯಿಯನ್ನು ಮುಚ್ಚಿಸುವಲ್ಲಿ ನ್ಯಾಯಾಲಯ ಯಶಸ್ವಿಯಾಗಿತ್ತು. ಈ ಮೂಲಕ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿಕರ‌ ಹೇಳಿಕೆ ಅಥವಾ ಬರಹಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈಗ ಡಿ. ರೂಪಾ ಅವರ ವಿರುದ್ಧದ ನಿರ್ಬಂಧ ತೆರವಾಗಿದೆ.







































































error: Content is protected !!
Scroll to Top