ಕಾರ್ಕಳ : ಮಯೂರ ಯೂತ್ ಕ್ಲಬ್ ವತಿಯಿಂದ ಸ್ವರಾಜ್ ಪ್ರೆಂಡ್ಸ್ ಇವರ ಸಹಕಾರದೊಂದಿಗೆ ಎ. 19 ರಿಂದ ಎ. 30 ರವರೆಗೆ ಸ್ವರಾಜ್ ಮೈದಾನದಲ್ಲಿ ಉಚಿತ ಕ್ರೀಡಾ ಶಿಬಿರ ಜರುಗಲಿದೆ. ಪ್ರತಿದಿನ 6:30 ರಿಂದ 9 ಗಂಟೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಪರಿಣಿತ ಕ್ರೀಡಾ ತರಬೇತುದಾರರಿಂದ ತರಬೇತಿ ನಡೆಯಲಿದ್ದು, ಬೆಳಗ್ಗೆ 6.30 ರಿಂದ 7:30 ರವರೆಗೆ ಫಿಟ್‌ನೆಸ್, 7:30 ರಿಂದ 9 ಗಂಟೆಯವರೆಗೆ ವಾಲಿಬಾಲ್ ಹಾಗೂ ಕಬ್ಬಡ್ಡಿ, ಖೋ-ಖೋ, ಅಥ್ಲೆಟಿಕ್ಸ್ ತರಬೇತಿ ನೀಡಲಿದ್ದಾರೆ. ಕ್ರೀಡಾ ಶಿಬಿರಕ್ಕೆ ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9845315428 (ವಿಜಯ್ ಕುಮಾರ್), 9845702974 (ರತ್ನವರ್ಮ ಅಜ್ರಿ) 7349718605 (ಚೇತನ್) ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ಆಯೋಜಕರು ತಿಳಿಸಿದ್ದಾರೆ.
ಎ. 19 : ಮಯೂರ ಯೂತ್ ಕ್ಲಬ್ ವತಿಯಿಂದ ಉಚಿತ ಕ್ರೀಡಾ ಶಿಬಿರ


































































