ಚಿಲಿಂಬಿಯಲ್ಲಿ ಕಾರು ಬೈಕ್‌ ಡಿಕ್ಕಿ – ದಂಪತಿಗೆ ಗಾಯ

ಕಾರ್ಕಳ : ಸಾಣೂರು ಗ್ರಾಮದ ಚಿಲಿಂಬಿ ಎಂಬಲ್ಲಿ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಘಟನೆ ಎ. 1ರಂದು ಸಂಭವಿಸಿದೆ. ಪುತ್ತಿಗೆ ಗ್ರಾಮದ ಕೃಷ್ಣ ಗೌಡ ಪತ್ನಿ ಶಾಂತ ಅವರೊಂದಿಗೆ ಮೂಡಬಿದ್ರೆಯಿಂದ ಕಾರ್ಕಳ ಕಡೆಗೆ ಬರುತಿದ್ದ ಸಂದರ್ಭ ಮೂಡುಬಿದ್ರೆಯಿಂದ ಕಾರ್ಕಳ ಕಡೆ ಉಮರುಲ್‌ ಫಾರುಕ್‌ ಚಲಾಯಿಸುತ್ತಿದ್ದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸಮೇತ ಸವಾರರು ರಸ್ತೆಗೆ ಬಿದ್ದಿರುತ್ತಾರೆ. ಗಾಯಗೊಂಡಿರುವ ಕೃಷ್ಣ ಗೌಡ ಹಾಗೂ ಶಾಂತ ಅವರನ್ನು ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ತಲೆಗೆ ಗಾಯಗೊಂಡಿರುವ ಕಾರಣ ಶಾಂತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































































error: Content is protected !!
Scroll to Top