ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗಿಫ್ಟ್

ಭದ್ರಾ ಮೇಲ್ದಂಡೆ ಯೋಜನೆಗೆ 5630 ಕೋ. ರೂ.

ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 5ನೇ ಬಜೆಟ್ ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಜೆಟ್​ನಲ್ಲಿ ಏನೆಲ್ಲ ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಫೆ. 17ರಂದು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಅದಕ್ಕೂ ಮೊದಲೇ ಮೋದಿ ಸರ್ಕಾರ ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಘೋಷಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಈ ಕುರಿತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿತ್ತು. ಇದೀಗ ಈ ಘೋಷಣೆಯಿಂದ ಮಧ್ಯ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.

ಕೇಂದ್ರ ಬಜೆಟ್ ನಲ್ಲಿ ಈ ವರೆಗೂ ಘೋಷಣೆಯಾದ ಅಂಶಗಳ ಪಟ್ಟಿ ಇಂತಿದೆ,
*ಆರ್ಥಿಕತೆ ಶೇ.7 ದರದಲ್ಲಿ ಪ್ರಗತಿ ನಿರೀಕ್ಷೆ
*ಒಂದು ವರ್ಷ ಉಚಿತ ಪಡಿತರ ಪೂರೈಕೆ ವಿಸ್ತರಣೆ – 2 ಲಕ್ಷ ಕೋ. ರೋ. ಅನುದಾನ
*ಆಧಾರ್‌, ಯುಪಿಐ, ಕೊವಿನ್‌ಗೆ ವಿಶ್ವಮಾನ್ಯತೆ
*220 ಕೋಟಿ ಕೊರೊನಾ ವ್ಯಾಕ್ಸಿನ್‌ ನೀಡಲಾಗಿದೆ
*14 ಕೋಟಿ ರೈತರ ಖಾತೆಗಳಿಗೆ 2.60 ಲ.ಕೋ. ರೈತರ ಖಾತೆಗೆ ವರ್ಗಾವಣೆ
*47 ಕೋಟಿ ಜನಧನ್‌ ಖಾತೆ ಓಪನ್‌
*ಮಹಿಳೆಯರ ಆರ್ಥಿಕ ಸಬಲೀಕರಣ ಗುರಿ
*81 ಲಕ್ಷ ಸ್ವಸಹಾಯ ಗುಂಪುಗಳಿಗೆ ನೆರವು
*ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್‌-ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ
*ಬಜೆಟ್‌ನಲ್ಲಿ ಅಭಿವೃದ್ಧಿಗೆ ʼಸಪ್ತಮಂತ್ರʼ
*ಹಸಿರುಕ್ರಾಂತಿ, ಸರ್ವರನ್ನು ಒಳಗೊಂಡ ಅಭಿವೃದ್ಧಿ
*ಯುವ ಸಬಲೀಕರಣ, ಯುವ ಸಬಲೀಕರಣಕ್ಕೆ ಒತ್ತು
*ಕೃಷಿ ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ಅದ್ಯತೆ
*ಸಿರಿಧಾನ್ಯ ಕೃಷಿಗೆ ವಿಶೇಷ ಯೋಜನೆ -ಭಾರತವೇ ಸಿರಿಧಾನ್ಯಗಳ ತವರು
*ಮತ್ಸ್ಯ ಸಂಪದಕ್ಕೆ ಪೂರಕವಾಗಿ ಉಪಯೋಜನೆ 6000 ಕೋ. ರೂ. ಅನುದಾನ
*ಹೈದರಾಬಾದ್‌ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ
*ಸಹಕಾರಿ ಸಂಘಗಳನ್ನು ಒಂದೇ ಸೂರಿನಡಿ ತರುವುದು
*157 ಹೊಸ ನರ್ಸಿಂಗ್‌ ಕಾಲೇಜು ಸ್ಥಾಪನೆ
*ಶಿಕ್ಷಕ ತರಬೇತಿಗೆ ವಿಶೇಷ ಆದ್ಯತೆ
*ವೈದ್ಯಕೀಯ ಶಿಕ್ಷಣಕ್ಕೆ ಒತ್ತು -ಹೊಸ ಪಠ್ಯಕ್ರಮ
*ರಾಷ್ಟ್ರೀಯ ಡಿಜಿಟಲ್‌ ಲೈಬ್ರರಿಗಳ ಸ್ಥಾಪನೆ
*ಮಕ್ಕಳಿಂದ ವೃದ್ದರ ತನಕ ಎಲ್ಲರಿಗೂ ಅಗತ್ಯವಿರುವ ಡಿಜಿಟಲ್‌ ಮಾಹಿತಿ
*ಪ್ರಾದೇಶಿಕ ಭಾಷೆಗಳಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ
*ಸಾರ್ವಜನಿಕ ಗ್ರಂಥಾಲಯಗಳಲ್ಲಿ ರೋಗಗಳ ಮಾಹಿತಿ
*ಖಾಸಗಿ ವೈದ್ಯಕೀಯ ಕಾಲೆಜುಗಳಲ್ಲಿ ಐಸಿಎಂಆರ್‌ ಲ್ಯಾಬ್‌ ಸ್ಥಾಪನೆ
*ಕೃಷಿ ಸಾಲಕ್ಕೆ 20 ಲಕ್ಷ ಕೋ.ರೂ. ಅನುದಾನ
*ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋ. ರೂ. ಅನುದಾನ
*ಜಿಡಿಪಿಯ ಶೇ.3.3ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲು
*ರೈಲ್ವೇಗೆ 2.40 ಲಕ್ಷ ಕೋಟಿ ರೂ. ಅನುದಾನ
*ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ
*ಕಲ್ಲಿದ್ದಲು, ರಸಗೊಬ್ಬರ, ಸಿಮೆಂಟ್‌, ಸ್ಟೀಲ್‌ ಸಾಗಣೆಗೆ ಆದ್ಯತೆ
*ಮ್ಯಾನ್‌ಹೋಲ್‌ನಿಂದ ಮೆಷಿನ್‌ಹೋಲ್‌ಗೆ ಬದಲಾವಣೆ -ಎಲ್ಲ ನಗರಗಳನ್ನು ಮ್ಯಾನ್‌ಹೋಲ್‌ ಮುಕ್ತ ಮಾಡುವ ಗುರಿ
*50 ಹೊಸ ವಿಮಾನ ನಿಲ್ದಾಣ ನಿರ್ಮಾಣ
*ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗೆ 15,000 ಕೋ. ರೂ. ಅನುದಾನ
*ಜಿಲ್ಲಾ ಶಕ್ಷಣ ಸಂಸ್ತೆಗಳ ಅಭಿವೃದ್ಧಿ
*ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ ಸೆಂಟರ್‌ ಸ್ಥಾಪನೆ
*ನಗರೋತ್ಥಾನಕ್ಕೆ 10 ಸಾವಿರ ಕೋ. ರೂ. ಅನುದಾನ
*ಎಂಎಸ್‌ಎಂಇಗಳಿಗೆ ವಿವಾದ್‌ ಸೆ ವಿಶ್ವಾಸ್‌ ಸ್ಕೀಂ
*ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆ
*ಸರ್ಕಾರಿ ನೌಕರರಿಗೆ ಮಿಷನ್‌ ಕರ್ಮಯೋಗಿ ಸ್ಕೀಂ
*ಕೆವೈಸಿ ಸರಳೀಕರಣಕ್ಕೆ ಕ್ರಮ
*ಇ-ಕೋರ್ಟ್‌ಗಳಿಗೆ 7 ಸಾವಿರ ಕೋ. ರೂ. ಅನುದಾನ
*ಮೂಲಸೌಕರ್ಯ ನಿರ್ಮಾಣಕ್ಕೆ 10 ಲಕ್ಷ ಕೋ. ರೂ. ಅನುದಾನ
*ಲ್ಯಾಬ್‌ನಲ್ಲಿ ಸಹಜ ವಜ್ರ ತಯಾರಿ-ಐಐಟಿಗಳಿಗೆ ಅನುದಾನ
*ಐಐಟಿಗೆ 5 ವರ್ಷ ಅಧ್ಯಯನ ಅನುದಾನ
*5ಜಿ app ಅಭಿವೃದ್ಧಿಗೆ 100 ಲ್ಯಾಬ್‌ ಸ್ಥಾಪನೆ
*ಕಾರ್ಬನ್‌ ಮುಕ್ತ ಪರಿಸರ ನಿರ್ಮಾಣಕ್ಕೆ 35 ಸಾವಿರ ಕೋ. ರೂ. ಅನುದಾನ
*ಗ್ರೀನ್‌ ಹೈಡ್ರೋಜನ್‌ ಮಿಷನ್‌ಗೆ 15,900 ಕೋ. ರೂ.
*ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್‌ ಸ್ಕೀಮ್‌
*ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ
*ಗೋವರ್ಧನ್‌ ಯೋಜನೆಯಡಿ 200 ಬಯೋಗ್ಯಾಸ್‌ ಪ್ಲಾಂಟ್‌ ಸ್ಥಾಪನೆ
*10 ಸಾವಿರ ಬಯೋ ಸನ್‌ಪುಟ್‌ ಸೆಂಟರ್‌ಗಳ ಸ್ಥಾಪನೆ
*2070ಕ್ಕೆ ಕಾರ್ಬನ್‌ ಮುಕ್ತ ಭಾರತ ನಿರ್ಮಾಣ ಗುರಿ
*ಹೈಡ್ರೋಜನ್‌ ಇಂಧನಕ್ಕೆ 19,700 ಕೊ. ರೂ. ಅನುದಾನ
*ಹೊಸ ಸರಕಾರಿ ವಾಹನಗಳ ಖರೀದಿಗೆ ಕೇಂದ್ರ ನೆರವು
*ಮಾಲಿನ್ಯ ನಿಯಂತ್ರಣಕ್ಕೆ ಹಳೇ ವಾಹನಗಳು ಗುಜರಿಗೆ
*ಪಿಎಂ ವಿಕಾಸ್‌ ಕೌಶಲ ಯೋಜನೆ ಜಾರಿ
*ಮಷಿನ್‌ ಕಲಿಕೆಗೆ ಕೇಂದ್ರದಿಂದ ಅನುದಾನ
*47 ಲಕ್ಷ ಯುವಕರಿಗೆ ಕಲಿಕಾ ವೇತನ
*ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್‌ ಟಚ್‌
*50 ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಕೇಂದ್ರದ ನೆರವು
*ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಪ್‌ app -ಸಮಗ್ರ ಮಾಹಿತಿ ಅಡಕ
*ದೇಖೊ ಅಪ್ನಾ ದೇಶ್‌- ಪ್ರವಾಸೋದ್ಯಮ ಉತ್ತೇಜನಕ್ಕೆ ಹೊಸ ಕಾರ್ಯಕ್ರಮ
*ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ
*ಜೈವಿಕ ಇಂಧನ ಉತ್ಪಾದನೆ, ಬಳಕೆಗೆ ಉತ್ತೇಜನ
*ಬ್ಯಾಂಕ್‌ ಕಾಯ್ದೆ, ಆರ್ಬಿಐ ಕಾಯ್ದೆಗೆ ಹೊಸ ಮಸೂದೆ
*ಆರ್‌ಬೀಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ
*ಡಿಜಿಟಲ್‌ ಪೇಮೆಂಟ್‌ ಶೇ. 76 ಹೆಚ್ಚಳ
*ಮಹಿಳಾ ಸಮ್ಮಾನ್‌ಗೆ ಸೇವಿಂಗ್‌ ಪತ್ರ ಯೋಜನೆ ಜಾರಿ
*2 ವರ್ಷಕ್ಕೆ ಶೆ.7.5 ಬಡ್ಡಿದರದಲ್ಲಿ 2 ಲ.ರೂ. ಠೇವಣಿ, ಆಂಶಿಕ ಹಿಂಪಡೆತಕ್ಕೆ ಅವಕಾಶ
*ಹಿರಿಯ ನಾಗರಿಕರಿಗೆ 15-30 ಲಕ್ಷ ರೂ. ಠೇವಣಿಗೆ ಅವಕಾಶ
*ಪೋಸ್ಟಲ್‌ ಉಳಿತಾಯ ಖಾತೆ ಮಿತಿ 5ರಿಂದ 9 ಲಕ್ಷಕ್ಕೇರಿಕೆ
*ರೆಡಿಮೇಡ್‌ ಬಟ್ಟೆ, ಸಿಗರೇಟು ದುಬಾರಿ
*ಮೊಬೈಲ್‌ ಬೆಲೆ ಇಳಿಕೆ
*ಕ್ಯಾಮರಾ ಲೆನ್ಸ್‌ ಬೆಲೆ ಇಳಿಕೆ
*ಸಿಎನ್‌ಜಿ ಕಸ್ಟಮ್ಸ್‌ ಶುಲ್ಕ ರದ್ದು
*ವಿದೇಶಿ ವಾಹನಗಳ ಆಮದು ದುಬಾರಿ
*ಲೀಥಿಯಂ ಬ್ಯಾಟರಿ ಶುಲಕ್ಕ ಶೇ. 13 ಇಳಿಕೆ
ಆದಾಯ ಕರ ವಿವರಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ7 ಲಕ್ಷ ರೂ.ಗೆ ಹೆಚ್ಚಳ
*3 ಲಕ್ಷದ ತನಕ ತೆರಿಗೆ ಇಲ್ಲ
*3-6 ಲಕ್ಷಕ್ಕೆ ಶೆ.5
*6-9 ಲಕ್ಷ ಶೇ. 10
*9-12 ಲಕ್ಷ -ಶೇ. 15
*12-15 ಲಕ್ಷ – ಶೇ. 20
*15 ಲಕ್ಷ – ಶೇ.30



















































































































































error: Content is protected !!
Scroll to Top