ಮುಂಬಯಿಯಲ್ಲೂ ಟಿಪ್ಪು ಸುಲ್ತಾನ್‌ ಹೆಸರಿನ ವಿವಾದ

ಉದ್ಯಾನದ ಹೆಸರು ಬದಲಾಯಿಸಲು ಸರಕಾರ ಆದೇಶ

ಮುಂಬಯಿ: ಮಹಾರಾಷ್ಟ್ರದ ಸರಕಾರ ಮುಂಬಯಿಯ ಉಪನಗರ ಮಲಾಡ್‌ನಲ್ಲಿ ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಹಾಕಲು ಆದೇಶಿಸಿದೆ.
ಮಲಾಡ್‌ನ ಈ ಉದ್ಯಾನವನಕ್ಕೆ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಟಿಪ್ಪು ಸುಲ್ತಾನ್ ಹೆಸರು ಇಟ್ಟಿತ್ತು. ಈಗ ಮುಂಬಯಿ ಉಪನಗರ ಜಿಲ್ಲೆಯ ಉಸ್ತುವಾರಿ ಸಚಿವ ಮಂಗಲ್ ಪ್ರಭಾತ್ ಲೋಢಾ ಅವರು ಮುಂಬಯಿ ಉತ್ತರ ಸಂಸದ ಗೋಪಾಲ್ ಶೆಟ್ಟಿ ಅವರ ಕೋರಿಕೆಯಂತೆ ಈ ನಿರ್ಧಾರ ಕೈಗೊಂಡಿದ್ದಾರೆ.
ಟಿಪ್ಪು ಸುಲ್ತಾನ್‌ಗೆ ಮಹಾರಾಷ್ಟ್ರದ ಜತೆ ಯಾವುದೇ ಸಂಬಂಧ ಇಲ್ಲದಿದ್ದರೂ ಕಳೆದ ವರ್ಷ ಎಂವಿಎ ಸರ್ಕಾರ ಒಲೇಕೆಗಾಗಿ ಮೈದಾನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟಿತ್ತು ಮತ್ತು ನಾವು ಅದರ ವಿರುದ್ಧ ಪ್ರತಿಭಟನೆ ನಡೆಸಬೇಕಾಯಿತು ಎಂದು ಗೋಪಾಲ ಶೆಟ್ಟಿ ಹೇಳಿದ್ದಾರೆ.
ಕೆಲವರು ಟಿಪ್ಪು ಸುಲ್ತಾನ್ ಉದ್ಯಾನವನ ಎಂದು ಬ್ಯಾನರ್ ಹಾಕಿದ್ದರು. ಆದರೆ ಸ್ಥಳೀಯರು ಅದನ್ನು ವಿರೋಧಿಸಿದ್ದರು. ಇದಕ್ಕೂ ಮೊದಲು ಔಪಚಾರಿಕವಾಗಿ ಹೆಸರಿಡಲಾಗಿಲ್ಲ. ಆದ್ದರಿಂದ ಅಗತ್ಯವನ್ನು ಮಾಡಿ ಅಕ್ರಮ ಬ್ಯಾನರ್ ಅನ್ನು ತೆಗೆದುಹಾಕಲು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪಾರ್ಕ್‌ಗೆ ಹೆಸರಿಡಬೇಕಾದರೆ ನಾವು ಸೂಕ್ತ ಕ್ರಮವನ್ನು ಅನುಸರಿಸುತ್ತೇವೆ. ಟಿಪ್ಪು ಸುಲ್ತಾನ್ ಹೆಸರನ್ನು ಉದ್ಯಾನವನಕ್ಕೆ ಇಡಲು ಯಾರೂ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Latest Articles

error: Content is protected !!