ಓವರ್‌ ಟೇಕ್‌ ಮಾಡುವ ಭರದಲ್ಲಿ ಬೈಕ್‌ ಪಲ್ಟಿ

ಕಾರ್ಕಳ : ಟಿಪ್ಪರ್‌ ಅನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬೈಕ್‌ ಸ್ಕಿಡ್‌ ಆಗಿ ಪಲ್ಟಿಯಾದ ಘಟನೆ ಮಂಗಳವಾರ ಕುಕ್ಕುಂದೂರು ಗ್ರಾಮದ ನಕ್ರೆ ಪಡ್ಯದಲ್ಲಿ ನಡೆದಿದೆ. ಸುಹೈಲ್‌ ಮೊಯಿದಿನ್‌ ಎಂಬುವವರು ಸಾಜಿದಾ ಬಾನು ಅವರೊಂದಿಗೆ ನಕ್ರೆ ಕಡೆಯಿಂದ ರಂಗನಪಲ್ಕೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಪಡ್ಯ ಎಂಬಲ್ಲಿ ಟಿಪ್ಪರ್‌ ಓವರ್‌ ಟೇಕ್‌ ಮಾಡುವಾಗ ಬೈಕ್‌ ಪಲ್ಟಿಯಾಗಿದೆ. ಈ ವೇಳೆ ಸಾಜಿದಾ ಅವರ ಎಡಕೈ ಟಿಪ್ಪರ್‌ ಮುಂಭಾಗದ ಚಕ್ರಕ್ಕೆ ಸಿಲುಕಿ ಜಖಂಗೊಂಡಿದೆ. ಚಿಕಿತ್ಸೆಗಾಗಿ ಸಾಜಿದಾ ಅವರನ್ನು ಮಂಗಳೂರಿನ ಹೈಲ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































































































































error: Content is protected !!
Scroll to Top