ದೇಶದ ಶ್ರೀಮಂತ ಅಭ್ಯರ್ಥಿಯ ಸಂಪತ್ತು 5,700 ಕೋ. ರೂ.

ಹೊಸದಿಲ್ಲಿ: ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಪಿ. ಚಂದ್ರಶೇಖರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ದೇಶದ ಅತಿ ಶ್ರೀಮಂತ ಅಭ್ಯರ್ಥಿ ಎಂಬ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಒಟ್ಟಾರೆ 5,705.47 ಕೋಟಿ ಎಂದು ಘೋಷಿಸಿದ್ದು, ಈ ಬಗ್ಗೆ ಸೋಷಿಯಲಕ್‌ ಮೀಡಿಯಾದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಎರಡನೇ ಶ್ರೀಮಂತ ಅಭ್ಯರ್ಥಿಯೂ ಪಕ್ಕದ ತೆಲಂಗಾಣದಲ್ಲಿ ಇದ್ದಾರೆ. ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ವಿಶ್ವೇಶ್ವರ್ ರೆಡ್ಡಿ 4,568 ಕೋಟಿ ರೂ ಸಂಪತ್ತಿನ ಒಡೆಯ.

ಚಂದ್ರಶೇಖರ್ ವೈದ್ಯ ಮತ್ತು ಉದ್ಯಮಿ. ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಅವರು 2316 ಕೋ. ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಶ್ರೀರತ್ನಾ ಹೆಸರಿನಲ್ಲಿ 2,289 ಕೋ.ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅನಿವಾಸಿ ಭಾರತೀಯರಾಗಿರುವ ಚಂದ್ರಶೇಖರ್‌ ಇದೇ ಸಲ ಮೊದಲ ಸಲ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ತಂಡೆ ಟಿಡಿಪಿಯ ನಾಯಕ.























































































































































error: Content is protected !!
Scroll to Top