ಕಾರ್ಕಳ ಕರಿಯಕಲ್ಲು ಪರಿಸರದಿಂದ ಗೋವು-ಕೋಳಿ ಕಳವು

ಕಾರ್ಕಳ : ಕಾರ್ಕಳ ಸಮೀಪದ ಕರಿಯಕಲ್ಲು ಮೋಹಿನಿ ಮೂಲ್ಯ ಎಂಬವರ ಹಟ್ಟಿಯಿಂದ ಎ. 19ರ ರಾತ್ರಿ ದನಕಳ್ಳತನವಾಗಿದೆ. ಜೀವನ ನಿರ್ವಹಣೆಗಾಗಿ ಮೂರು ತಿಂಗಳ ಹಿಂದೆ ಅವರು ಹಸು ಖರೀದಿಸಿದ್ದು, ಆ ಹಸುವನ್ನು ಮಂಗಳವಾರ ರಾತ್ರಿ ಗೋಕಳ್ಳರು ಹೊತ್ತೊಯ್ದಿದ್ದಾರೆ. ಇದರೊಂದಿಗೆ ಕೋಳಿಗೂಡಿನಲ್ಲಿದ್ದ 5 ಕೋಳಿ, 2 ನಾಯಿಮರಿಗಳನ್ನು ಕಳವು ಮಾಡಲಾಗಿದೆ. ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆ ಪರಿಸರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

ಗೃಹೋಪಯೋಗಿ ವಸ್ತಗಳನ್ನು ಮಾರಾಟ ಮಾಡುವವರು, ಗುಜರಿ ವ್ಯಾಪಾರಸ್ಥರು ಕರಿಯಕಲ್ಲು, ಗುಂಡಾಜೆ ಪರಿಸರದಲ್ಲಿ ಮನೆ ಮನೆಗೆ ಬರುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಅಧಿಕವಾಗಿದೆ. ಇಂತವರೇ ಗೋಕಳ್ಳರಿಗೆ ಮಾಹಿತಿ ನೀಡುವ ಸಾಧ್ಯತೆ ಎಂದು ದನಕಳೆದುಕೊಂಡಿರುವ ಮೋಹಿನಿ ಅವರು ಗುಮಾನಿ ವ್ಯಕ್ತಪಡಿಸಿದರು.

ಕಾರ್ಕಳ ಪರಿಸರದಲ್ಲಿ ನಿರಂತರವಾಗಿ, ಅವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಸ್ಥಳೀಯ ದಲ್ಲಾಳಿಗಳ ಸಹಕಾರದೊಂದಿಗೆ ಮೂಲ್ಕಿ, ಸುರತ್ಕಲ್‌, ಮೂಡಬಿದ್ರೆಯ ಗೋಕಳ್ಳರು ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.









































































































































































error: Content is protected !!
Scroll to Top