ಕಾರ್ಕಳ : ಗೋಕಳ್ಳರ ಸೆರೆ

ಮೂವರು ಅಂದರ್‌

ಆರೋಪಿತರು ತಪ್ಪಿಸಿಕೊಳ್ಳುವಲ್ಲಿ ಸಹಕರಿಸಿದವರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

ಕಾರ್ಕಳ : ಶಿರ್ಲಾಲು, ಕೆರ್ವಾಶೆ, ಅಜೆಕಾರು ಪರಿಸರದ ಮನೆಗಳ ಹಟ್ಟಿಯಿಂದ ಗೋ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಮೂವರನ್ನು ಸೆ. 23ರಂದು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ತಲ್ವಾರು ಜಳಪಿಸಿ ಗೋವು ಕಳ್ಳತನ ಮಾಡುತ್ತಿದ್ದ ಮತ್ತು ಈ ಮೂಲಕ ಸಮಾಜದ ಶಾಂತಿ ಕದಡುತ್ತಿದ್ದ ಮೂಡಬಿದ್ರಿ ಗಂಟಾಲ್‌ಕಟ್ಟೆ ಪರಿಸರದ ಝಬೀರ್, ಸಲೀಮ್ ಹಾಗೂ ಹನೀಫ್‌ ಯಾನೆ ಇಚ್ಚನನ್ನು ಬಂಧಿಸಿ, ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಗೋ ಕಳ್ಳತನ ಕೃತ್ಯಕ್ಕೆ ಬ್ರೋಕರ್ ಆಗಿ ಸಹಕರಿಸುತ್ತಿದ್ದ ಕಡ್ತಲದ ಸತೀಶ್ ನಾಯ್ಕ ಎಂಬಾತನನ್ನು ಸೆ. 20ರಂದೇ ಪೊಲೀಸರು ಸೆರೆ ಹಿಡಿದಿದ್ದರು.

ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಸಹಕರಿಸಿದವರ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅವರಿಗಾಗಿ ಬಲೆ ಬೀಸಿದ್ದಾರೆ. ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಅಜೆಕಾರು, ಕಾರ್ಕಳ ಗ್ರಾಮಾಂತರ, ನಗರ ಪೊಲೀಸ್‌ ಠಾಣೆ ಪಿಎಸ್‌ಐ, ಸಿಬ್ಬಂದಿ ವರ್ಗ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ

ಗೋಕಳ್ಳತನ ಕೃತ್ಯವೆಸಗುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಸೆ. 19 ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌ ಭಜರಂಗ ಜನಜಾಗೃತಿ ಸಭೆ ನಡೆಸಿತ್ತು. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೆ. 21ರ ಅಹೋರಾತ್ರಿ ಅಜೆಕಾರು ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದ್ದರು. ಭಜನೆ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದರು.





























































































































































































































error: Content is protected !!
Scroll to Top