Wednesday, January 26, 2022
spot_img
HomeUncategorizedಕಾರ್ಕಳ : ತಂಪುಪಾನೀಯವೆಂದು ಆಸಿಡ್‌ ಕುಡಿದ ಯುವತಿ

ಕಾರ್ಕಳ : ತಂಪುಪಾನೀಯವೆಂದು ಆಸಿಡ್‌ ಕುಡಿದ ಯುವತಿ

ಕಾರ್ಕಳ : ತಂಪು ಪಾನೀಯವೆಂದು ಯುವತಿಯೋರ್ವಳು ಆಸಿಡ್‌ ಕುಡಿದ ಘಟನೆ ಜೂ. 2ರಂದು ಮುಡಾರು ಗ್ರಾಮದ ಮುಡ್ರಾಲು ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ನಡೆದಿದ್ದು, ಸೆ. 23ರಂದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದ ಈಕೆ ಬಾಯಾರಿಕೆಗಾಗಿ ತಂಪು ಪಾನೀಯವೆಂದು ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಅಸ್ಟಸ್ಥಗೊಂಡಿದ್ದರು. ಅವರನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು.

ಹಣ ನೀಡಲು ನಿರಾಕರಿಸಿದರು
ಆಸ್ಪತ್ರೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದಾಗಿ ಫ್ಯಾಕ್ಟರಿಯ ಮಾಲಿಕರು ತಿಳಿಸಿದ್ದು ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭ ಪೊಲೀಸರಿಗೆ ಹೇಳಿಕೆ ನೀಡುವಾಗ ಈ ಬಗ್ಗೆ ಕಾನೂನು ಕ್ರಮದ ಅಗತ್ಯವಿಲ್ಲವಾಗಿ ಹೇಳಿದ್ದರು. ಬಳಿಕ ಫ್ಯಾಕ್ಟರಿಯ ಮಾಲಿಕರು ಹಣಕೊಡಲು ನಿರಾಕರಿಸಿದ್ದು, ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಬಂದಿಲ್ಲ. ಕ್ಯಾಶ್ಯೂ ಫ್ಯಾಕ್ಟರಿ ಮಾಲಿಕ ಗಣೇಶ್ ಕಾಮತ್ ಅವರ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!