ಕಾರ್ಕಳ : ಕೌಟುಂಬಿಕ ದೃಢತೆಗೆ ರೋಟರಿ ಆನ್ಸ್ ಕ್ಲಬ್ ಸಹಕಾರಿ. ರೋಟರಿ ಕ್ಲಬ್‌ನ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಗೆ ಆನ್ಸ್ ವಿಭಾಗ ಪೂರಕವಾಗಿ ಸ್ಪಂದಿಸಲಿ ಎಂದು ವೃಂದಾ ಹರಿಪ್ರಕಾಶ್ ಶೆಟ್ಟಿ ಹೇಳಿದರು. ಅವರು ಜು. 27ರಂದು ಪೆರ್ವಾಜೆ ಶಾಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಆನ್ಸ್ ಕ್ಲಬ್‌ನ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪೈ ಅಧ್ಯಕ್ಷತೆ ವಹಿಸಿದ್ದರು.
ಮೇಘ ಶ್ರೀ ಪ್ರಶಾಂತ್ ಅಧ್ಯಕ್ಷೆ
ಮೇಘ ಶ್ರೀ ಪ್ರಶಾಂತ್ ಜೈನ್ ಅವರು ಸತತ ದ್ವಿತೀಯ ಅವಧಿಗೆ ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ‘ಗ್ಲೋಬಲ್ ಗ್ರಾಂಟ್ ಯೋಜನೆ’ಗೆ ಮೇಜರ್ ಡೋನರ್ ಆಗಿರುವ ಜ್ಯೋತಿ ಪೈ, ಜಗನಾಥ ಪೈ ಅವರನ್ನು ಹಾಗೂ ದಾನಿ ಜಗದೀಶ್ ಹೆಗ್ಡೆಯವರನ್ನು ಡಾ. ಭರತೇಶ್ ಆದಿರಾಜ್ ಗೌರವಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಬೆಳಿರಾಯ ಉಪಸ್ಥಿತರಿದ್ದರು. ಗೀತಾ ರಾವ್ ಸ್ವಾಗತಿಸಿ, ಸುರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಆನ್ಸ್ ಕಾರ್ಯದರ್ಶಿ ಲಕ್ಷ್ಮಿ ಹೆಗ್ಡೆ ವಂದಿಸಿದರು.

















