Saturday, December 4, 2021
spot_img
Homeಸ್ಥಳೀಯ ಸುದ್ದಿಮೆರವಣಿಗೆ, ಸತ್ಯಾಗ್ರಹದೊಂದಿಗೆ ಲಕ್ಷಾಂತರ ದೇಶಭಕ್ತರ ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರೆತಿದೆ- ಪ್ರಭಾಕರ್‌ ಭಟ್‌

ಮೆರವಣಿಗೆ, ಸತ್ಯಾಗ್ರಹದೊಂದಿಗೆ ಲಕ್ಷಾಂತರ ದೇಶಭಕ್ತರ ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರೆತಿದೆ- ಪ್ರಭಾಕರ್‌ ಭಟ್‌

ಕಾರ್ಕಳ : ಮೆರವಣಿಗೆ, ಸತ್ಯಾಗ್ರಹದೊಂದಿಗೆ ಲಕ್ಷಾಂತರ ದೇಶಭಕ್ತರ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.
1975ರ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹೋರಾಟದ ರೋಚಕ ನೆನಪುಗಳು ಕುರಿತು ಕಾರ್ಕಳ ಶಾಸಕರ ಕಚೇರಿಯಲ್ಲಿ ನಡೆದ ಲೈವ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆಹರೂ ಕುಟುಂಬದವರ ಅಧಿಕಾರ ದಾಹದಿಂದ ದೇಶ ಅಂದು ವಿಭಜನೆಯಾಯಿತು. 10 ವರ್ಷ ಕಾದಿದ್ದರೆ ಅಖಂಡವಾಗಿಯೇ ದೇಶಕ್ಕೆ ಸ್ವಾತಂತ್ರ್ಯ ದೊರೆಯುತ್ತಿತ್ತು. ನೆಹರೂ ನಂತರ ಪ್ರಧಾನಿಯಾದ ಇಂದಿರಾ ಗಾಂಧಿ ಕಾಲದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಸ್ವಜನ ಪಕ್ಷಪಾತ ಆಡಳಿತ ನಡೆಸಿರುವುದರಿಂದ ಜನರು ರೊಚ್ಚಿಗೇಳುವಂತಾಯಿತು. ಜಯಪ್ರಕಾಶ್‌ ಅವರ ನೇತೃತ್ವದಲ್ಲಿ ದೇಶದಾದ್ಯಂತ ಇಂದಿರಾ ಗಾಂಧಿ ವಿರುದ್ಧ ಪ್ರತಿಭಟನೆಗಳು ನಡೆದವು. ಅಂದು ರೈಲ್ವೇ ಮಂತ್ರಿಯಾಗಿದ್ದ ಲಾಲ್‌ ಬಹದ್ಧೂರ್ ಶಾಸ್ತ್ರೀಯವರು ರಾಜೀನಾಮೆ ಕೂಡ ನೀಡಿದ್ದರು. ಇಂದಿರಾ ಗಾಂಧಿ ತನ್ನ ಅಧಿಕಾರಕ್ಕಾಗಿ ಕಾನೂನನ್ನು ಬಳಸಿ, ಮಧ್ಯ ರಾತ್ರಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದರು. ಅಟಲ್‌ ಬಿಹಾರಿ ವಾಜಪೇಯಿ, ಅಡ್ವಾಣಿ ಮೊದಲಾದ ನಾಯಕರನ್ನು ರಾತ್ರೋರಾತ್ರಿ ಬಂಧಿಸಲಾಯಿತು ಎಂದು ಪ್ರಭಾಕರ್‌ ಭಟ್‌ ಅಂದಿನ ಘಟನೆ ಕುರಿತು ತಿಳಿಸಿದರು.

ಸತ್ಯಾಗ್ರಹ ಸಂದೇಶ
ತುರ್ತು ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಒಂದು ನಿರ್ಣಯಕ್ಕೆ ಬಂತು. ಇಂದಿರಾ ಗಾಂಧಿ ಸರ್ವಾಧಿಕಾರದ ವಿರುದ್ಧ ಪ್ರತೀ ತಾಲೂಕು ಕೇಂದ್ರದಲ್ಲಿ ಸತ್ಯಾಗ್ರಹ ನಡೆಸುವಂತೆ ಆರ್‌ಎಸ್‌ಎಸ್‌ ಸೂಚಿಸಿತು. ಒಂದೆಡೆ ನೇರವಾಗಿ ಪ್ರತಿಭಟಿಸುವ ಹಾಗೂ ಮತ್ತೊಂದೆಡೆ ಭೂಗತವಾಗಿ ಕಾರ್ಯಾಚರಿಸುವ ಕಾರ್ಯ ಮಾಡಲಾಯಿತು. ಈ ವೇಳೆ ನಮ್ಮ ಸಾಕಷ್ಟು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಎರಡನೇ ಸುತ್ತಿನ ಪ್ರತಿಭಟನೆಯಲ್ಲಿ ಮಂಗಳೂರಿನ ಜೈಲ್‌ನಲ್ಲಿ ಜಾಗವಿಲ್ಲದೇ ಕೆಲವೊಂದು ಶಾಲೆಗಳನ್ನೇ ಕಾರಾಗೃಹವಾಗಿ ಮಾರ್ಪಡಿಸಲಾಯಿತು ಎಂದು ಪ್ರಭಾಕರ್‌ ಭಟ್‌ ನೆನಪಿಸಿಕೊಂಡರು.

ಜನತಾ ಪಕ್ಷಕ್ಕೆ ಅಭೂತಪೂರ್ವ ಗೆಲುವು
ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಜನತಾಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿತು. ಈ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಇಂದಿರಾ ಗಾಂಧಿ, ಆರ್‌ಎಸ್‌ಎಸ್‌ನ ಪಿಸುಮಾತು ಪ್ರಚಾರದಿಂದಾಗಿ ನಾನು ಸೋತೆ ಎಂದರು. ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ದೇಶವಿಂದು ಬಲಿಷ್ಠವಾಗಿದೆ ಎಂದು ಪ್ರಭಾಕರ್‌ ಭಟ್‌ ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!