ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವದಲ್ಲಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎರಡು ಚಿನ್ನದ ಪದಕ ದೊರೆತಿದೆ. ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ಪ್ರತಿ ವರ್ಷ ವಿಶ್ವದ್ಯಾನಿಲಯದ ಬಿಕಾಂ ಪದವಿಯ ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳ ಫೈನಾನ್ಶಿಯಲ್ ಅಕೌಂಟೆನ್ಸಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ಈ ಚಿನ್ನದ ಪದಕವನ್ನು ಎರಡೂ ಸೆಮೆಸ್ಟರ್‌ಗಳಲ್ಲಿ ನೂರೈವತ್ತು ಅಂಕಗಳಿಗೆ ನೂರೈವತ್ತು ಅಂಕ ಗಳಿಸಿದ ಸಹನಾ ಭಟ್ ಕೆ. ಹಾಗೂ ಪ್ರಸ್ತುತ ಇದೇ ಕಾಲೇಜಿನ ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿನಿಯಾಗಿರುವ ರಶ್ಮಿ ಭಟ್ ಚಿನ್ನದ ಪದಕ ಪಡೆದಿರುತ್ತಾರೆ.
ಎಂಪಿಎಂ ಸರಕಾರಿ ಕಾಲೇಜಿಗೆ ಚಿನ್ನದ ಪದಕ



























































