ಕಾರ್ಕಳ : ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಈ ಬಾರಿ ಸೌಕೂರು ಮೇಳದ ಭಾಗವತ ಡಾ. ರವಿಕುಮಾರ್ ಸೂರಾಲು ಅವರಿಗೆ ನೀಡಲಾಗುವುದು ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಜ.23 ರಂದು ರಾತ್ರಿ 9 ಗಂಟೆಗೆ ಹಿರ್ಗಾನ ಶ್ರೀಕುಂದೇಶ್ವರ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಂದು ಸೌಕೂರು ಮೇಳದವರಿಂದ ಪುಷ್ಪಚಂದನ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದರು.
ಉತ್ಸವ
ಜ.21 ರಿಂದ 23ರರೆಗೆ ವರ್ಷಾವಧಿ ಮಹೋತ್ಸವ ನಡೆಯಲಿದೆ. ಜ.21 ರಂದು ತೋರಣ ಮುಹೂರ್ತ, ಜ. 22ರಂದು ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ನೇಮೋತ್ಸವ, ಜ.23ರಂದು ಸಂಪ್ರೋಕ್ಷಣೆ ನಡೆಯಲಿದೆ ಎಂದು ವೇದಮೂರ್ತಿ ಕೃಷ್ಣರಾಜೇಂದ್ರ ಭಟ್ ತಿಳಿಸಿದ್ದಾರೆ.



























































