ಕಾರ್ಕಳ : ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಹರಿಕೃಷ್ಣ ನೆಲ್ಲಿ ಅವರ ಮನೆಯಿಂದ ಚಿನ್ನ ಕಳವಾದ ಕುರಿತು ವರದಿಯಾಗಿದೆ. ಹರಿಕೃಷ್ಣ ಅವರ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಬೆಡ್ ರೂಂನ ಗೋದ್ರೇಜ್ ಕಪಾಟು ಮತ್ತು ವಾಲ್ಡೋಸ್ ಕಪಾಟಿನಲ್ಲಿರಿಸಿದ್ದ ಸುಮಾರು 82 ಗ್ರಾಂ. ತೂಕದ ಚಿನ್ನಾಭರಣ ದೋಚಿದ್ದಾರೆ. ಚಿನ್ನದ ಮೌಲ್ಯ 3,28,000 ರೂ. ಆಗಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರ್ಗಾನ : 3,28,000 ರೂ. ಮೌಲ್ಯದ ಚಿನ್ನ ಕಳವು



























































