ಕಠಿಣ ಶ್ರಮ-ಸಮಯ ಪ್ರಜ್ಞೆ- ನಿಶ್ಚಿತ ಗುರಿಯೇ ಯಶಸ್ಸಿನ ಮೆಟ್ಟಿಲು : ಎಂ.ಕೆ. ವಿಜಯಕುಮಾರ್

ಕಾರ್ಕಳ : ಕಠಿಣ ಪರಿಶ್ರಮ, ಸಮಯ ಪ್ರಜ್ಞೆ, ನಿಶ್ಚಿತ ಗುರಿ ಹೊಂದಿದ್ದಲ್ಲಿ ಮಾತ್ರವೇ ಯಶಸ್ಸು ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ನಿಶ್ವಿತ ಗುರಿಯೊಂದಿಗೆ ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೇ ಕ್ರಮಬದ್ಧವಾದ ಅಭ್ಯಾಸ, ಪರಿಶ್ರಮದ ಮೂಲಕ ಭವಿಷ್ಯದಲ್ಲಿ ಯಶಸ್ವಿಯಾಗಬೇಕೆಂದು ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್‌ ಹೇಳಿದರು.
ಅವರು ಶುಕ್ರವಾರ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು.‌ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಜೇಸೀಸ್ ಶಾಲಾ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಸಂಚಾಲಕ ಡಾ. ಮುರಳೀಧರ ಭಟ್,‌ ಸಾಣೂರು ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ. ಸುಮತಿ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿ, ಶಿಕ್ಷಕಿಯರಾದ ಶಮ್ಯಾ ನಿರೂಪಿಸಿ, ಮಮತಾ ವಂದಿಸಿದರು.























































































































error: Content is protected !!
Scroll to Top