ಬಂಗ್ಲೆಗುಡ್ಡೆ- ಸಾಲ್ಮರ ರಸ್ತೆ ಮರುಡಾಮರೀಕರಣ

ಕಾರ್ಕಳ : ಪುರಸಭಾ ವ್ಯಾಪ್ತಿಯ ಬಂಗ್ಲೆಗುಡ್ಡೆಯಿಂದ ಸಾಲ್ಮರವರೆಗಿನ ಚತುಷ್ಪಥ ರಸ್ತೆ ಮರು ಡಾಮರೀಕರಣವಾಗುತ್ತಿದೆ. 78 ಲಕ್ಷ ರೂ. ವೆಚ್ಚದಲ್ಲಿ ಬಂಗ್ಲೆಗುಡ್ಡೆಯಿಂದ ಬಂಡಿಮಠ ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ ಬಂಡಿಮಠದಿಂದ ಸಾಲ್ಮರವರೆಗಿನ ರಸ್ತೆ ಮರು ಡಾಮರೀಕರಣವಾಗುತ್ತಿದೆ. ಈ ರಸ್ತೆ ತೀರಾ ಹದಗೆಟ್ಟಿದ್ದರಿಂದ ಕಳೆದ ಒಂದು ವರ್ಷಗಳಿಂದ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಮಳೆಗಾಲದಲ್ಲಂತೂ ರಸ್ತೆಯಲ್ಲಿನ ಹೊಂಡ ಗುಂಡಿಗಳನ್ನು ಗುರುತಿಸಲು ಸಾಧ್ಯವಾಗದೇ ದ್ವಿಚಕ್ರ ಸವಾರರು ಪರಿತಪಿಸುವಂತಾಗಿತ್ತು. ಇದೀಗ ಎಸ್‌ಎಸ್‌ಎಫ್‌ಸಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.





























































































































error: Content is protected !!
Scroll to Top