ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ನವೀನ್ ಎನ್. ಹೆಗ್ಡೆ ಆಯ್ಕೆ

ಮೂಡಬಿದ್ರಿ : ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಇದರ ನೂತನ ಅಧ್ಯಕ್ಷರಾಗಿ ನವೀನ್‌ ಎನ್‌. ಹೆಗ್ಡೆ, ಕಾರ್ಯದರ್ಶಿಯಾಗಿ ಪ್ರಣೀಲ್ ಹೆಗ್ಡೆ ಆಯ್ಕೆಯಾಗಿರುತ್ತಾರೆ.‌ ಇತ್ತೀಚೆಗೆ ಮೂಡಬಿದ್ರಿ ಕೋಟೆಬಾಗಿಲು ಶ್ರೀ ವೀರಮಾರುತಿ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿ. ಪ್ರಭಾಕರ್ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ಸುಶಾಂತ್ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿ ಹೆಗ್ಡೆ ನಾರಾವಿ, ಸುಂದರ್ ಹೆಗ್ಡೆ ಬಿ.ಇ., ಲೀಲಾ ಆರ್. ಹೆಗ್ಡೆ, ಪ್ರಸನ್ನ ಹೆಗ್ಡೆ ಸಾಗಿನ ಬೆಟ್ಟು, ಡಾ. ಸುರೇಂದ್ರಕುಮಾರ್ ಹೆಗ್ಡೆ, ರವೀಂದ್ರ ಹೆಗ್ಡೆ ಆಯ್ಕೆಗೊಂಡರು. ಡಾ. ಕೇಶವ್ ಎಸ್. ಹೆಗ್ಡೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.























































































































error: Content is protected !!
Scroll to Top