ಕಾರ್ಕಳ : ಗ್ರಾ.ಪಂ. ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ

ಕಾರ್ಕಳ : ಗ್ರಾ.ಪಂ. ಚುನಾವಣಾ ಫಲಿತಾಂಶ ಡಿ. 30ರಂದು ಹೊರಬೀಳಲಿದ್ದು, 796 ಗ್ರಾ.ಪಂ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆ ಕಾರ್ಯ ಎಂಪಿಎಂ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಅಲ್ಲಿನ 8 ಕೊಠಡಿಗಳ 48 ಟೇಬಲ್‌ಗಳಲ್ಲಿ ಮತಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ. ಸುಮಾರು 215 ಮಂದಿ ಸಿಬ್ಬಂದಿ ಮತಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಎಣಿಕೆ ಕೊಠಡಿಯಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಇತರ ಸಿಬ್ಬಂದಿ, ಅಭ್ಯರ್ಥಿಗಳು ಅಥವಾ ಅವರ ಏಜೆಂಟ್‌ ಕೊಠಡಿಯಲ್ಲಿ ಹಾಜರಿರಲು ಅವಕಾಶ ಕಲ್ಪಿಸಲಾಗಿದೆ.

ಭದ್ರತೆ
ಮತಎಣಿಕೆ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ, 1 ಸಿಪಿಐ, 4 ಪಿಎಸ್‌ಐ, 100 ಪೊಲೀಸ್, ಗೃಹ ರಕ್ಷಕ ದಳ ಸಿಬ್ಬಂದಿ ಭದ್ರತಾ ಕಾರ್ಯ ನಡೆಸಲಿದ್ದಾರೆ. 1 ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತಂಡವಿರಲಿದೆ ಎಂದು ಇಲಾಖಾ ಮೂಲಗಳಿಂದ ತಿಳಿದುಬಂದಿದೆ. ಮತಎಣಿಕೆ ಕೇಂದ್ರದ ಆವರಣದೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.

ಮದ್ಯ ಮಾರಾಟಕ್ಕಿಲ್ಲ ನಿರ್ಬಂಧ ?
ಸಾಮಾನ್ಯವಾಗಿ ಮತ ಎಣಿಕೆ ದಿನ ಮದ್ಯ ಮಾರಾಟಕ್ಕೆ ಚುನಾವಣಾ ಆಯೋಗ ನಿಷೇಧ ಹೇರುತ್ತಿತ್ತು. ಆದರೆ, ಈ ಬಾರಿ ಮದ್ಯ ಮಾರಾಟದ ನಿರ್ಬಂಧ ಕುರಿತು ಯಾವೊಂದು ಆದೇಶ ಬಂದಿಲ್ಲವೆಂದು ಅಬಕಾರಿ ಇಲಾಖಾ ಮೂಲಗಳು ತಿಳಿಸಿವೆ.

ಬೆಟ್ಟಿಂಗ್‌

ಭರಾಟೆಗ್ರಾಮ ಮಟ್ಟದಲ್ಲಿ ಬೆಟ್ಟಿಂಗ್‌ ದಂಧೆ ಜೋರಾಗಿದೆ. ಅಭ್ಯರ್ಥಿ ಗೆಲುವು, ಗೆಲುವಿನ ಅಂತರ, ಪಂಚಾಯತ್‌ ಯಾರ ಬೆಂಬಲಿತರ ಹಿಡಿತಕ್ಕೆ ಸಿಗಲಿದೆ ಎಂಬ ಕುರಿತು ಬೆಟ್ಟಿಂಗ್‌ ಗ್ರಾಮ ಮಟ್ಟದಲ್ಲಿ ಜೋರಾಗಿ ನಡೆಯುತ್ತಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.























































































































error: Content is protected !!
Scroll to Top