ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲಾಗಿದೆ : ಪ್ರಶಾಂತ್‌ ನಾತು

0

ಕಾರ್ಕಳ : ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಜಾಗತೀಕರಣದ ಪ್ರಭಾವ ಮಾಧ್ಯಮಗಳ  ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಪ್ರಸ್ತುತ ಮಾಧ್ಯಮ ಕ್ಷೇತ್ರ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿವೆ ಎಂದು ಸುವರ್ಣ ಚಾನೆಲ್‍ನ ದೆಹಲಿ ವಿಭಾಗದ ಹಿರಿಯ ವರದಿಗಾರ ಪ್ರಶಾಂತ್ ನಾತು ಅಭಿಪ್ರಾಯಪಟ್ಟರು.

ಅವರು ಶ್ರೀ ಭುವನೇಂದ್ರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆ.11 ರಂದು ಮಾಧ್ಯಮದ ಮುಂದಿರುವ ಸವಾಲುಗಳು ಹಾಗೂ ಭವಿಷ್ಯ ವಿಷಯದ ಕುರಿತು ನಡೆದ ರಾಷ್ಟ್ರೀಯ ಮಟ್ಟದ ವೆಬಿನಾರ್‍ನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳು ಮಾಧ್ಯಮದ ಮೇಲೆ ದೊಡ್ಡ ಮಟ್ಟಿನ ಪರಿಣಾಮವುಂಟು ಮಾಡಿದೆ. ಮಾಧ್ಯಮಗಳ ವಿಶ್ವಾಸಾರ್ಹತೆ, ಗುಣಾತ್ಮಕತೆಯನ್ನು ಪ್ರಶ್ನಿಸುವ ಮಟ್ಟಿಗೆ ಸುಳ್ಳು ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ವಸ್ತು ನಿಷ್ಠತೆ, ತಟಸ್ಥ ಧೋರಣೆಯನ್ನು ವರದಿಗಾರಿಕೆಯಲ್ಲಿ ಹೊಂದಿರಬೇಕಾದ ಜವಾಬ್ದಾರಿ ಪತ್ರಕರ್ತನ ಮೇಲಿದೆ. ತಂತ್ರಜ್ಞಾನದ ಬದಲಾವಣೆ ಮಾಧ್ಯಮ ಕ್ಷೇತ್ರಕ್ಕೂ ವ್ಯಾಪಕವಾಗಿ ಹರಡಿಕೊಂಡಿದೆ. ಡಿಜಿಟಲ್ ತಂತ್ರಜ್ಞಾನ ಮಾಧ್ಯಮದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಸಮಾಜದ ಬದಲಾವಣೆಯಲ್ಲಿ ಮಾಧ್ಯಮ ಪಾತ್ರ ಹಿರಿದಾದುದು. ಡಿಜಿಟಲ್ ಯುಗದಲ್ಲಿ ಮಾಧ್ಯಮಗಳು ತನ್ನ ವ್ಯಾಪ್ತಿಯನ್ನು ಬದಲಾಯಿಸಿಕೊಳ್ಳುತ್ತಿವೆ. ಕಾರ್ಯವ್ಯಾಪ್ತಿಯೂ ಬದಲಾಗುತ್ತಿದೆ. ಮಾಧ್ಯಮಗಳೂ ತನ್ನದೇ ಆದ ರೀತಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಹಾಗೂ ವೆಬಿನಾರ್ ಸಂಯೋಜಕಿ ರಕ್ಷಿತಾ ಕುಮಾರಿ ತೋಡಾರು, ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವೆಬಿನಾರ್ ಸಹ ಸಂಯೋಜಕ ಚಂದ್ರಕಾಂತ ಗೋರೆ, ತಾಂತ್ರಿಕ ಸಹಕಾರ ನೀಡಿದ ಗಣಕ ಯಂತ್ರ ವಿಭಾಗದ ದಿವ್ಯಾಕ್ಷ ಪ್ರಭು, ದಿನೇಶ್ ದೇವಾಡಿಗ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.---
Previous articleಎಸ್‌ಬಿಐ ಎಟಿಎಂ ನಿಯಮ ಬದಲು
Next articleಆರು ಬಸ್‌ಗಳ ಮಾಲಕ ಈಗ ವಾಹನ ತೊಳೆಯುವ ಕಾರ್ಮಿಕ  

LEAVE A REPLY

Please enter your comment!
Please enter your name here