ದಿಲ್ಲಿ, ಆ. 18: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ತೆಗೆಯುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳನ್ನು ಎಸ್ಬಿಐನ ಅಧಿಕೃತ ವೆಬ್ಸೈಟ್ sbi.co.inನಲ್ಲಿ ಪ್ರಕಟಿಸಲಾಗಿದೆ. ಮೆಟ್ರೋ ವಲಯದ ಉಳಿತಾಯ ಖಾತೆದಾರರಿಗೆ ಎಟಿಎಂಗಳಿಂದ ಒಂದು ತಿಂಗಳಲ್ಲಿ 8 ಉಚಿತ ವಹಿವಾಟುಗಳಿವೆ. ಉಚಿತ ವಹಿವಾಟಿನ ಮಿತಿ ಮುಗಿದ ನಂತರ ಪ್ರತಿ ವಹಿವಾಟಿಗೆ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತದೆ.
8 ಉಚಿತ ವಹಿವಾಟುಗಳಲ್ಲಿ 5 ಎಸ್ಬಿಐ ಎಟಿಎಂ ಮತ್ತು 3 ಇತರ ಬ್ಯಾಂಕ್ ಎಟಿಎಂಗಳ ವ್ಯವಹಾರಗಳು ಸೇರಿವೆ. ಮೆಟ್ರೋ ಅಲ್ಲದ ನಗರಗಳಲ್ಲಿ, 10 ಉಚಿತ ವಹಿವಾಟುಗಳು ಲಭ್ಯವಿದ್ದು, ಅದರಲ್ಲಿ 5 ವಹಿವಾಟುಗಳನ್ನು ಎಸ್ಬಿಐ ಮೂಲಕ ಮಾಡಬಹುದಾಗಿದ್ದು, ಇತರ ಬ್ಯಾಂಕುಗಳ ಎಟಿಎಂನಿಂದ ಉಳಿದ 5 ವಹಿವಾಟು ಮಾಡಲು ಅವಕಾಶವಿದೆ. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಮಾಸಿಕ ಸರಾಸರಿ 1,00,000 ರೂ. ಉಳಿತಾಯ ಇರುವ ಖಾತೆದಾರರು ಸ್ಟೇಟ್ ಬ್ಯಾಂಕ್ ಗ್ರೂಪ್ (ಎಸ್ಬಿಜಿ) ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಅನಿಯಮಿತ ವಹಿವಾಟುಗಳನ್ನು ನಡೆಸಬಹುದು.
ಖಾತೆಯಲ್ಲಿ ಉಳಿತಾಯ ಇಲ್ಲದೆ ಎಟಿಎಂ ವಹಿವಾಟು ವಿಫಲವಾದರೆ ಎಸ್ಬಿಐ 20 ರೂಪಾಯಿ ಶುಲ್ಕ ಮತ್ತು ಜಿಎಸ್ಟಿ ವಿಧಿಸುತ್ತದೆ.