ಉಡುಪಿ, ಆ. 10: ಹೊಟೇಲಿನ ಕಸದ ಬುಟ್ಟಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ.ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಅಸ್ಪತ್ರೆ ಸಮೀಪವಿರುವ ಧ್ವಾರಕ ಹೊಟೇಲ್ ಬಳಿ ಬಾಳೆ ಎಲೆಯ ತ್ಯಾಜ್ಯದ ರಾಶಿಯಲ್ಲಿ ಮಗು ಪತ್ತೆಯಾಗಿದೆ. ಹೊಟೇಲ್ ಮಾಲೀಕ ಮನೋಹರಗ ಕಾಮತ್ ರಿಗೆ ಕಸದ ರಾಶಿಯಿಂದ ಮಗು ಅಳುವ ಶಬ್ದ ಕೇಳಿಸಿದ ಹಿನ್ನಲೆಯಲ್ಲಿ ಹುಡುಕಾಡಿದಾಗ ಪೈಂಟ್ ಡಬ್ಬಿಯಲ್ಲಿ ಮಗು ಕಂಡು ಬಂದಿದೆ.
ಅಗಷ್ಟೇ ಹುಟ್ಟಿದ ಮಗು ಇದು ಎಂದು ತಿಳಿದುಬಂದಿದ್ದು, ಸ್ಥಳೀಯ ಧ್ವಾರಕ ಹೊಟೇಲ್ ಮಾಲಕ ಮನೋಹರ್ ಕಾಮತ್ ಸಮಾಜ ಸೇವಕ ನಿತ್ಯನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆಅಗಮಿಸಿ ಮಗುವನ್ನು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ತಾಯಿನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.