ಸಂಜಯ್‌  ದತ್‌ ಆರೋಗ್ಯ ಸ್ಥಿರ

ಮುಂಬಯಿ,ಆ. 9: ಉಸಿರಾಟದ ಸಮಸ್ಯೆ  ಕಾಣಿಸಿಕೊಂಡು ಶನಿವಾರ ರಾತ್ರಿ ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಸಂಜಯ್ ದತ್‌ (‌61) ಚೇತರಿಸಿಕೊಂಡಿದ್ದಾರೆ.

ದಿಢೀರ್‌ ಅಸ್ವಸ್ಥರಾದ ಸಂಜಯ್‌ ದತ್‌ ಅವರನ್ನು ಶನಿವಾರ ರಾತ್ರಿ ಐಸಿಯುಗೆ ದಾಖಲಿಸಲಾಗಿತ್ತು. ಪತ್ನಿ ಮಾನ್ಯತಾ ಮತ್ತು ಮಕ್ಕಳಾದ ಶಹ್ರಾನ್‌ ಮತ್ತು ಇಕ್ರಾ ಕಳೆದ ಮಾರ್ಚ್‌ನಲ್ಲಿ ದುಬಾಯಿಗೆ ಹೋದವರು ಇನ್ನೂ ವಾಪಾಸು ಬಂದಿಲ್ಲ. ಲಾಕ್‌ ಡೌನ್‌ ಕಾರಣ ಅವರು ಅಲ್ಲಿ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ.

ಸಂಜಯ್‌  ಆರೋಗ್ಯ  ಸ್ಥಿರವಾಗಿದೆ. ಕಳವಳಪಡಬೇಕಾದ ಅಗತ್ಯವಿಲ್ಲ. ಅವರಿಗೆ ಕೊರೊನಾ ಪರೀಕ್ಷೆಯನ್ನೂ ಮಾಡಲಾಗಿದೆ. ವರದಿ ನೆಗೆಟಿವ್‌ ಬಂದಿದೆ  ಎಂದು  ವೈದ್ಯರು  ತಿಳಿಸಿದ್ದಾರೆ. ಎದೆನೋವಿನಿಂದಾಗಿ ಉಸಿರಾಟದ ಸಮಸ್ಯೆ  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜಯ್‌ ದತ್‌ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 error: Content is protected !!
Scroll to Top