ಲಾಕ್‌ ಡೌನ್‌ ವಿಸ್ತರಣೆಗೆ ಸಚಿವರ ಒಲವು ; ಮುಖ್ಯಮಂತ್ರಿ ನಿರಾಕರಣೆ

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊಕೊನಾ ಹರಡುವುದನ್ನು ತಡೆಯುವ ಸಲುವಾಗಿ ಹೇರಿದ್ದ ಒಂದು ವಾರದ ಲಾಕ್‌ ಡೌನ್‌ ಮಂಗಳವಾರಕ್ಕೆ ಮುಕ್ತಾಯವಾಗಲಿದೆ.ಸರಕಾರವೇನೋ ಲಾಕ್‌ ಡೌನ್‌ ಮುಂದುವರಿಸಿವುದಿಲ್ಲ ಎಂದು ಹೇಳಿದ್ದರೂ ಕೆಲವು ಸಚಿವರು ಲಾಕ್‌ ಡೌನ್‌ ಮುಂದುವರಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಹೊಂದಿದ್ದಾರೆ.  ಜನರ  ಮನಸ್ಸಿನಲ್ಲಿ ಪ್ರಶ್ನೆ ಲಾಕ್ ಡೌನ್ ವಿಸ್ತರಣೆಯಾಗುತ್ತದೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಸಚಿವರಲ್ಲೂ ಈ ವಿಚಾರವಾಗಿ ಒಮ್ಮತವಿಲ್ಲ. ಕೆಲವರು ಲಾಕ್‌ ಡೌನ್‌ ವಿಸ್ತರಣೆಯಾಗಬೇಕು ಎಂದರೆ ಕೆಲವರು ಬೇಡ ಎನ್ನುತ್ತಿದ್ದಾರೆ.

ಮುಖ್ಯಮಂತ್ರಿ  ಯಡಿಯೂರಪ್ಪ ಲಾಕ್ ಡೌನ್ ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ, ಇದೇ ವೇಳೆ ಆರೋಗ್ಯ ತಜ್ಞರು ಮತ್ತು ಸಚಿವ ಸಂಪುಟದ ಇಬ್ಬರು ಪ್ರಮುಖ ಮಂತ್ರಿಗಳು ಲಾಕ್ ಡೌನ್ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ, ಕೊರೋನಾ ಸರಪಣಿ ತುಂಡು ಮಾಡಲು ಕನಿಷ್ಠ 14 ದಿನ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದ್ದಾರೆ.

ವಿಶೇಷವೆಂದರೆ, ಬೆಂಗಳೂರಿನ ಎಂಟು ಬಿಬಿಎಂಪಿ ವಲಯಗಳ ಉಸ್ತುವಾರಿ ಸಚಿವರು ಬುಧವಾರದಿಂದ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ತಿಳಿಸಿದ್ದಾರೆ. ಯಾವುದೇ ಲಾಕ್ ಡೌನ್ ಇರುವುದಿಲ್ಲ,  ಲಾಕ್ ಡೌನ್ ಮುಂದುವರಿಸಿದರೇ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಸಿಎಂ ಯಡಿಯೂರಪ್ಪ ಅವರ ನಿರ್ಧಾರವೂ ಕೂಡ ಇದೇ ಆಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಆದರೆ ಸಚಿವರುಗಳಾದ ಶ್ರೀರಾಮುಲು ಮತ್ತು ಕೆ. ಸುಧಾಕರ್ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಈ ಪ್ರಸ್ತಾವನೆಗೆ ಆರೋಗ್ಯ ಇಲಾಖೆ ಕೂಡ ಲಾಕ್ ಡೌನ್ ವಿಸ್ತರಿಸುವಂತೆ ತಿಳಿಸಿದೆ. ಮನೆ-ಮನೆಗೆ ಸಮೀಕ್ಷೆ ನಡೆಸಲು ಇದು ವಾರ್ಡ್ ಸಮಿತಿಗಳಿಗೆ  ಸಮಯವನ್ನು ನೀಡುತ್ತದೆ, ಒಂದು ವಾರದ ಲಾಕ್ ಡೌನ್ ನಿಂದ ಯಾವುದೇ ಫಲಿತಾಂಶ ದೊರೆಯುವುದಿಲ್ಲ ಎಂದು ಕೆಲವರು ಪ್ರತಿಪಾದಿಸಿದ್ದಾರೆ.

ಯಾವುದೇ ಕಾರಣಕ್ಕೂ ಲಾಕ್ ಡೌನ್ ವಿಸ್ತರಣೆಯಾಗುವುದಿಲ್ಲ, ಲಾಕ್‌ಡೌನ್ ಅನ್ನು ವಿಸ್ತರಿಸುವಲ್ಲಿ ಯಾವುದೇ ಅರ್ಥವಿಲ್ಲ ಏಕೆಂದರೆ ಜನರಿಗೂ ಲಾಕ್ ಡೌನ್ ಬೇಕಿಲ್ಲ, ರಾತ್ರಿಯವರೆಗೂ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ ಮತ್ತು ಆ ಸ್ಥಳಗಳನ್ನು ಮುಚ್ಚಲು ಪೊಲೀಸರಿಗೆ ಕಷ್ಟವಾಗುತ್ತದೆ ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ.

Latest Articles

error: Content is protected !!