ದಿಲ್ಲಿ: ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನೊಂದು ಮೈಲುಗಲ್ಲು ನೆಟ್ಟಿದ್ದಾರೆ.ಟ್ವಿಟ್ಟರ್ ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ 6 ಕೋಟಿ ತಲುಪಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಜಾಗತಿಕ ನಾಯಕರ ಪೈಕಿ ಮೋದಿ ಮುಂಚೂಣಿಯಲ್ಲಿದ್ದಾರೆ.ಜಾಗತಿಕವಾಗಿ ಅವರ ಜನಪ್ರಿಯತೆ ದಸನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮೋದಿ ಟ್ವಿಟ್ಟರ್ ಬಳಸಲು ಪ್ರಾರಂಭಿಸಿದ್ದು 2009ರಲ್ಲಿ. ಆಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.2010ರಲ್ಲಿ ಅವರಿಗಿದ್ದದ್ದು 1 ಲಕ್ಷ ಹಿಂಬಾಲಕರು.2011ರಲ್ಲಿ ಹಿಂಬಾಲಕರ ಸಂಖ್ಯೆ 4 ಲಕ್ಷಕ್ಕೇರಿತು.
ಜನರ ಜೊತೆಗಿನ ಸಂಪರ್ಕ ಮತ್ತು ರಾಜಕೀಯ ಹೇಳಿಕೆಗಳನ್ನು ನೀಡಲು ಮೋದಿ ಟ್ವಿಟ್ಟರ್ ಅನ್ನು ಸಶಕ್ತವಾಗಿ ಬಳಸುತ್ತಿದ್ದಾರೆ.ಸರಕಾರದ ವಿವಿಧ ಅಭಿಯಾನಗಳ ಬಗ್ಗೆ ಮಾಹಿತಿ ನೀಡಲು,ಮಹಿಳಾ ಸುರಕ್ಷತೆ, ವಿದ್ಯಾರ್ಥಿಗಳ ಜೊತೆ ಸಂವಾದ ಇತ್ಯಾದಿ ವಿಚಾರಗಳಿಗೆ ಮೋದಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ.