ಬೆಂಗಳೂರು : ಕೊರೊನಾ ಕಾಟದಿಂದಾಗಿ ಈ ವರ್ಷ ಶಾಲೆಗಳು ಯಾವಾಗ ಪ್ರಾರಂಭವಾಗಲಿವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಈ ನಡುವೆ ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಪಾಠ ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಸೋಮವಾರದಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಡಿಡಿ ಚಂದನದಲ್ಲಿ ಪಾಠ ಮಾಡಲು ನಿರ್ಧರಿಸಲಾಗಿದೆ.ಡಿಡಿ ಚಂದನ ವಾಹಿನಿಯಲ್ಲಿ 8ರಿಂದ 10ನೇ ತರಗತಿ ವರೆಗೆ ಪಾಠ ಶುರು ಆಗಲಿದೆ ಎಂದು ಮೂಲಗಳು ತಿಳಿಸಿವೆ.
10 ದಿನಗಳ ತರಗತಿ ವೇಳಾಪಟ್ಟಿ ಪ್ರಕಟ ಮಾಡಲಾಗುವುದು. ಪ್ರತಿ ಅರ್ಧ ಗಂಟೆಗೆ 1 ವಿಷಯ ಬೋಧನೆ ಮಾಡಲಾಗುವುದು. 4 ಗಂಟೆಯಲ್ಲಿ 8 ವಿಷಯಗಳಿಗೆ ಪಾಠ ನಡೆಯುತ್ತದೆ. ಸೇತುಬಂಧ ಮೂಲಕ ಡಿಡಿಯಲ್ಲಿ ಪಾಠ ಮಾಡುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.