ಕಳೆದ ಜೂನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ನಟ ಸಶಾಂತ್ ಸಿಂಗ್ ರಜಪೂತ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟಕ್ ಮಹೇಂದ್ರ ಸಿಂಗ್ ಧೋನಿಯ ಜೀವನಾಧರಿತ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು ಸುಶಾಂತ್. ವಿಚಿತ್ರ ಎಂದರೆ ಈಗ ಸುಶಾಂತ್ ಜೀವನವೆ ಸಿನೇಮಾ ಆಗುತ್ತಿದೆ.
ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು.ಬಾಲಿವುಡ್ನಲ್ಲಿ ನಡೆಯುತ್ತಿರುವ ನೆಪೋಟಿಸಂ (ಸ್ವಜನ ಪಕ್ಷಪಾತ) ಕುರಿತು ಚರ್ಚೆ ಭುಗಿಲೆದ್ದಿದೆ. ಇದೆಲ್ಲದರ ನಡುವೆ ಸುಶಾಂತ್ ಕುರಿತು ಸಿನಿಮಾ ನಿರ್ಮಾಣವಾಗ್ತಿದ್ದು, ಪೋಸ್ಟರ್ ರಿಲೀಸ್ ಆಗಿದೆ.
ಸುಶಾಂತ್ ಸಿಂಗ್ ರಜಪೂತ್ ಅನುಭವಿಸಿದ ನೋವು, ಅವಮಾನ, ಸಾಧನೆ ಎಲ್ಲವನ್ನೂ ಸೇರಿಸಿ, ನಿರ್ದೇಶಕ ಶಮಿಕ್ ಮೌಲಿಕ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಚಿತ್ರಕ್ಕೆ ‘ಸೂಸೈಡ್ ಆರ್ ಮರ್ಡರ್’ ಅನ್ನೋ ಟೈಟಲ್ ಫಿಕ್ಸ್ ಮಾಡಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ವಿಜಯ್ ಶೇಖರ್ ಗುಪ್ತಾ ನಿರ್ಮಾಣದ ಚಿತ್ರಕ್ಕೆ A star was lost ಅನ್ನೋ ಸಬ್ ಟೈಟಲ್ ಕೂಡ ಇದೆ.
ಧೋನಿ ಬಯೋಪಿಕ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನಟಿಸಿ, ಸಕ್ಸಸ್ ಕಂಡಿದ್ದು ಗೊತ್ತೇ ಇದೆ. 2016ರಲ್ಲಿ ಬಂದ ಈ ಸಿನಿಮಾದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರ ಧೋನಿ ಪಾತ್ರದಲ್ಲಿ ಸುಶಾಂತ್ ಪರಕಾಯ ಪ್ರವೇಶ ಮಾಡಿದ್ದರು. ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದ್ದು ಮಾತ್ರವಲ್ಲದೇ ಬಾಕ್ಸಾಫೀಸ್ನಲ್ಲಿ ಸಿನೆಮಾ ಧೂಳೆಬ್ಬಿಸಿತ್ತು. ಆದರೆ, ಈ ಸಿನಿಮಾದಲ್ಲಿ ನಟಿಸಲಿಕ್ಕೆ ಅಕ್ಷಯ್ ಕುಮಾರ್ ಉತ್ಸುಕರಾಗಿದ್ದರಂತೆ. ಆದರೆ, ಧೋನಿ ಪಾತ್ರಕ್ಕೆ ಸುಶಾಂತ್ ಅವರೇ ಬೇಕು ಅಂತ ನೀರಜ್ ಪಾಂಡೆ ಆಯ್ಕೆ ಮಾಡಿಕೊಂಡಿದ್ದರಂತೆ.
ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿರುವ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ ಬಿಟೌನ್ನಲ್ಲಿದೆ ಇರುವ ಸ್ವಜನ ಪಕ್ಷಪಾತ ಮತ್ತು ಸ್ಟಾರ್ ಕುಡಿಗಳಿಡಬ ಮೊದಲ ಮಣೆ ಹಾಕುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತದೆ. ಅಭಿಮಾನಿಗಳು ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಬೇಕು ಅಂತ ಆಗ್ರಹಿಸುತ್ತಿದ್ದಾರೆ. ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು.