ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಂದು ಮೂವರು ಬಲಿ

0

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಮೂವರನ್ನು ಕೊರೊನಾ ಸೋಂಕು ಬಲಿ ಪಡೆದಿದೆ.ಇಬ್ಬರು ವೃದ್ಧೆಯರು,ಒಬ್ಬ ವ್ಯಕ್ತಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ದ.ಕ ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಮರಣ ಮೃದಂಗ.ಮಾರಕ ಕೊರೊನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಬಲಿಯಾಗಿದ್ದಾರೆ.

ಸುಳ್ಯ ತಾಲೂಕಿನ ಕೆರೆಮೂಲೆ ನಿವಾಸಿ ವೃದ್ದೆ ಕೊರೊನಾಗೆ ಇಂದು ಬೆಳಿಗ್ಗೆ ಬಲಿಯಾಗಿದ್ದರು.

ಇದೀಗ ಮತ್ತೆ ಇಬ್ಬರು ಸೇರಿ ಇಂದು ಒಟ್ಟು ಮೂವರು ಬಲಿಯಾಗಿದ್ದಾರೆ.ಇನ್ನೋರ್ವ ಮಹಿಳೆ ಹಾಗೂ ಪುರುಷ ಕೊರೋನಾಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

Previous articleನೇತ್ರಾವತಿ ಸೇತುವೆಯಲ್ಲಿ ಇನ್ನೊಂದು ಆತ್ಮಹತ್ಯೆ
Next articleಅನಧಿಕೃತವಾಗಿ ದೇಣಿಗೆ ವಸೂಲಿ –ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಜನರು

LEAVE A REPLY

Please enter your comment!
Please enter your name here