ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ ಎರಡು ವರ್ಷದ ಬಾಲಕ ಆದಿತ್ಯ ರಾಮ್

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಆದಿತ್ಯ ರಾಮ್ ಆರ್. ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾನೆ. ಮೂಲತಃ ರಾಮನಗರ ನಿವಾಸಿ ರಾಮಕೃಷ್ಣ ಹಾಗೂ ದೀಪಿಕಾ ದಂಪತಿ ಪುತ್ರನೇ ಆದಿತ್ಯ ರಾಮ್, ಭಾರತದ 28 ರಾಜ್ಯಗಳ ರಾಜಧಾನಿಗಳ ಹೆಸರು, ಕರ್ನಾಟಕದ 31 ಜಿಲ್ಲೆಗಳ ಹೆಸರು ಮತ್ತು 12 ದೇಶಗಳ ರಾಷ್ಟ್ರೀಯ ಚಿಹ್ನೆಗಳನ್ನು ನೆನಪಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾನೆ. ಇಷ್ಟೇ ಅಲ್ಲದೇ 23 ರಾಷ್ಟ್ರೀಯ ನಾಯಕರು, 8 ಕನ್ನಡ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನೂ ಈ ಮಗು ಸುಲಲಿತವಾಗಿ ಹೇಳಬಲ್ಲ. 16 ಹಣ್ಣುಗಳು, 32 ಪ್ರಾಣಿಗಳು, 12 ಆಕಾರಗಳು, 8 ಗ್ರಹಗಳು, ಹಿಂದಿ ವರ್ಣಮಾಲೆಯ ಅಕ್ಷರಗಳು, 24 ದೇಶಗಳ ಧ್ವಜಗಳನ್ನು‌ ಗುರುತಿಸುವ ಕಲೆಯನ್ನೂ ಹೊಂದಿದ್ದಾನೆ. ತನ್ನ ತೊದಲು ಮಾತಿನಲ್ಲೇ ಪಟಪಟನೇ ಉತ್ತರ ನೀಡುವ ಈ ಬಾಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.































































































error: Content is protected !!
Scroll to Top