ತೋಟಗಾರಿಕೆ ಇಲಾಖೆ ವತಿಯಿಂದ ಜೇನುಕೃಷಿ ತರಬೇತಿ

ಕಾರ್ಕಳ : ತೋಟಗಾರಿಕೆ ಇಲಾಖೆ ವತಿಯಿಂದ ಜೇನುಕೃಷಿ ಆಸಕ್ತರಿಗೆ ಅ. 6-7ರಂದು ಪ್ರಾಯೋಗಿಕ ಜೇನು ಕೃಷಿ ತರಬೇತಿಯನ್ನು ಜೋಡುರಸ್ತೆ ದುರ್ಗಾ ಹೈಸ್ಕೂಲ್‍ ಬಳಿಯಿರುವ ಮಧುವನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ತರಬೇತಿಯು ಉಚಿತವಾಗಿದ್ದು, ತರಬೇತಿ ಪಡೆದ ರೈತರಿಗೆ ಶೇ. 75ರ ಸಹಾಯಧನದಲ್ಲಿ ಕುಟುಂಬ ಸಹಿತ ಜೇನು ಪೆಟ್ಟಿಗೆ ಪಡೆಯಲು ಅವಕಾಶವಿರುತ್ತದೆ. ಕೃಷಿ ಜಮೀನು ಹೊಂದಿರದ ಜೇನು ಕೃಷಿ ಆಸಕ್ತರು ಕೂಡ ತರಬೇತಿ ಹಾಗೂ ಸಹಾಯಧನಕ್ಕೆ ಅರ್ಹರಿರುತ್ತಾರೆ. ಆಸಕ್ತರು ತಮ್ಮ ಆಧಾರ್, ಬ್ಯಾಂಕ್ ಖಾತೆ ಪ್ರತಿ, ಪಹಣಿ ಪತ್ರದ ಪ್ರತಿ(ಕಡ್ಡಾಯವಲ್ಲ)ಯೊಂದಿಗೆ ಅ.6ರಂದು ಬೆಳಗ್ಗೆ 9.30ಕ್ಕೆ ತರಬೇತಿಗೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ತರಬೇತಿಗೆ ನೋಂದಣಿಗಾಗಿ 9972425333 (ಯತಿರಾಜ್ ಶೆಟ್ಟಿ) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

























































































































error: Content is protected !!
Scroll to Top