ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಗುರುಪೂರ್ಣಿಮೆ ಹಾಗೂ ಆಷಾಡ ಮಾಸದ ವಿಶೇಷತೆಯ ಕುರಿತು ಜು. 11ರಂದು ಪೆರ್ವಾಜೆ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ವಸುಧಾ ಶೆಣೈ ಅವರು ಆಷಾಡ ಮಾಸದ ವಿಶೇಷತೆಯ ಕುರಿತು ಹಾಗೂ ಸಾವಿತ್ರಿ ಮನೋಹರ್ ಅವರು ಗುರು ಪೂರ್ಣಿಮೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಸಂಘಟನೆಯ ಸದಸ್ಯೆಯರಾದ ಡಾ. ಸುಮತಿ ಪ್ರಭು ಹಾಗೂ ಡಾ. ಮಾಲತಿ ಜಿ. ಪೈ ಅವರನ್ನು ಸನ್ಮಾನಿಸಲಾಯಿತು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿದರು. ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸುಲೋಚನ ಬಿ. ವಿ. ವಂದಿಸಿದರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ : ಗುರುಪೂರ್ಣಿಮೆ – ಆಷಾಢ ಮಾಸ ವಿಶೇಷತೆ ಕಾರ್ಯಕ್ರಮ






































