ಸ್ವಚ್ಛತೆಯೇ ಆರೋಗ್ಯದ ಗುಟ್ಟು – ಡಾ. ಕೃಷ್ಣಾನಂದ ಮಲ್ಯ

ಕಾರ್ಕಳ : ಜೀವನದಲ್ಲಿ ಎಲ್ಲಕ್ಕಿಂತ ಆರೋಗ್ಯ ಮುಖ್ಯವಾದುದು. ಸ್ವಚ್ಛತೆಯೇ ಆರೋಗ್ಯದ ಗುಟ್ಟು. ನೈಮರ್ಲ್ಯ ಕಾಪಾಡಿದಲ್ಲಿ ಸ್ವಾಸ್ಥ್ಯ ಸಮಾಜ ನಮ್ಮದಾಗಿಸಿಕೊಳ್ಳಬಹುದು ಎಂದು ನಿಟ್ಟೆ ಗಾಜ್ರಿಯಾ ಹಾಸ್ಪಿಟಲ್‌ನ ವೈದ್ಯ ಡಾ. ಕೃಷ್ಣಾನಂದ ಮಲ್ಯ ಹೇಳಿದರು.
ಜು. 1ರಂದು ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಆರೋಗ್ಯ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶ ಕಂಡ ಶ್ರೇಷ್ಠ ವೈದ್ಯ ಡಾ. ಬಿ.ಸಿ. ರಾಯ್ ಅವರ ನೆನಪಿಗಾಗಿ ಪ್ರತಿ ವರ್ಷ ನಾವು ವೈದ್ಯರ ದಿನವನ್ನು ಆಚರಿಸುತ್ತೇವೆ. ಈ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಹಾಗೂ ವೈದ್ಯರ ಸೇವೆಯನ್ನು ಸ್ಮರಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಕೆ. ವೆಂಕಟೇಶ್ ಪ್ರಭು ಮಾತನಾಡಿ, ವೈದ್ಯಕೀಯ ವೃತ್ತಿ ಎನ್ನುವುದು ಒಂದು ಸೇವೆ. ವೈದ್ಯರೆಂದರೆ ದೇವರ ಸ್ವರೂಪ. ಅವರು ಜೀವವನ್ನು ಉಳಿಸುವ ಕಾರ್ಯ ಮಾಡುತ್ತಾರೆ. ಅವರ ಸೇವೆಗೆ ಸಮಾಜ ಸದಾ ಋಣಿ ಎಂದರು
ಸಂಸ್ಥೆಯ ಪೋಷಕ ಪ್ರತಿನಿಧಿ ಡಾ. ನಮಿತಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಪ್ರಮೀಳಾ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರದ್ಯೋತ್ ಕಾರ್ಯಕ್ರಮವನ್ನು ನಿರೂಪಿಸಿ, ಸಮರ್ಥ್ ನಾಡಿಗೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಹಾಗೂ ಸಂವಾದ ಕಾರ್ಯಗಾರ ನಡೆಯಿತು.































































































error: Content is protected !!
Scroll to Top